ಅಯೋಧ್ಯೆ: ಎಲ್ಲೆಲ್ಲೂ ರಾಮನವಮಿ ಸಂಭ್ರಮದ ನಡುವೆ ಅಯೋಧ್ಯೆಯ ನೂತನ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದ್ದು, ಈ ಅನನ್ಯ ಸನ್ನಿವೇಶ ಆಸ್ತಿಕ ವಲಯದ ಗಮನಸೆಳೆಯಿತು.
ಸೂರ್ಯ ರಶ್ಮಿ ಬಾಲರಾಮನ ವಿಗ್ರಹ ಸ್ಪರ್ಶಿಸುತ್ತಿದ್ದಂತೆಯೇ ದೇವರ ಹಣೆಯಲ್ಲಿ ವಿಶಷ್ಠ ತಿಲಕ ಇಟ್ಟಂತೆ ಗೋಚರವಾಗಿದೆ. ಈ ಸೊಗಸಾದ ಸನ್ನಿವೇಶಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.
असुर नाग खग नर मुनि देवा।
आइ करहिं रघुनायक सेवा।।
जन्म महोत्सव रचहिं सुजाना।
करहिं राम कल कीरति गाना।।असुर-नाग, पक्षी, मनुष्य, मुनि और देवता सब अयोध्या में आकर रघुनाथ जी की सेवा करते हैं। विद्वान जन प्रभु के जन्म का महोत्सव मनाते हैं और श्री राम की सुंदर कीर्ति का गान करते हैं।… pic.twitter.com/joNulZeOKD
— Shri Ram Janmbhoomi Teerth Kshetra (@ShriRamTeerth) April 17, 2024
ನೂತನವಾಗಿ ನಿರ್ಮಾಣಗೊಂಡಿದ್ದ ರಾಮಮಂದಿರ ಇದೀಗ ಆಸ್ತಿಕರ ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು. ಜನವರಿ 22ರಂದು ಉದ್ಘಾಟನೆಯಾಗಿರುವ ದೇಗುಲದಲ್ಲಿರುವ ರಾಮಲಲ್ಲಾ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಷಿಸುವ ಬಗೆಗಿನ ಸುದ್ದಿಯಿಂದಾಗಿ ಆಸದತಿಕ ವಲಯ ಈ ಸನ್ನಿವೇಶಕ್ಕಾಗಿ ಕಾದು ಕುಳಿತಿತ್ತು. ಪ್ರಾಣಪ್ರತಿಷ್ಠೆಯ ನಂತರ ನಂದ ಮೊದಲ ರಾಮನವಮಿ ದಿನದಂದೇ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ. ಮಧ್ಯಾಹ್ನ 12ಗಂಟೆ 1 ನಿಮಿಷಕ್ಕೆ ಸೂರ್ಯ ತಿಲಕ ಕಂಗೊಳಿಸಿದ್ದು, ಸುಮಾರು ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಸ್ಪರ್ಶಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರೂ ಈ ಸಂದರ್ಭದಲ್ಲಿ ಚುನಾವಣಾ ಪ್ರಚಾರವನ್ನೂ ಬದಿಗಿಟ್ಟು ಈ ಅಪೂರ್ವ ಸನ್ನಿವೇಶವನ್ನು ಸಾಕ್ಷೀಕರಿಸಿದರು.
After my Nalbari rally, I watched the Surya Tilak on Ram Lalla. Like crores of Indians, this is a very emotional moment for me. The grand Ram Navami in Ayodhya is historic. May this Surya Tilak bring energy to our lives and may it inspire our nation to scale new heights of glory. pic.twitter.com/QqDpwOzsTP
— Narendra Modi (@narendramodi) April 17, 2024