ಬೆಂಗಳೂರು: ಸುನೀತಾ ವಿಲಿಯಮ್ಸ್ ಕರ್ನಾಟಕ ಮತ್ತು ಭಾರತದಾದ್ಯಂತದ ಜನರಿಗೆ, ವಿಶೇಷವಾಗಿ ನಕ್ಷತ್ರಗಳನ್ನು ತಲುಪಲು ಬಯಸುವ ಯುವ ಮನಸ್ಸುಗಳಿಗೆ ಉತ್ತಮ ಸ್ಫೂರ್ತಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಭೂಮಿಗೆ ಮರಳಿ ಸ್ವಾಗತ ಎಂದಿರುವ ಸಿದ್ದರಾಮಯ್ಯ, ಬಾಹ್ಯಾಕಾಶದಲ್ಲಿ ಅದ್ಭುತ ಪ್ರಯಾಣದ ನಂತರ ನೀವು ಸುರಕ್ಷಿತವಾಗಿ ಹಿಂದಿರುಗಿದ್ದೀರಿ ಎಂದು ಕೇಳಿ ಸಂತೋಷವಾಯಿತು ಎಂದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ‘X’ನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.
‘ನಿಮ್ಮ ಸಾಧನೆಗಳು ಮಾನವ ಪರಿಶ್ರಮ ಮತ್ತು ವೈಜ್ಞಾನಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ’ ಎಂದು ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಗ್ಗೆ ಬರೆದುಕೊಂಡಿರುವ ಸಿಎಂ, ಸುನೀತಾ ವಿಲಿಯಮ್ಸ್ ಕರ್ನಾಟಕ ಮತ್ತು ಭಾರತದಾದ್ಯಂತದ ಜನರಿಗೆ, ವಿಶೇಷವಾಗಿ ನಕ್ಷತ್ರಗಳನ್ನು ತಲುಪಲು ಬಯಸುವ ಯುವ ಮನಸ್ಸುಗಳಿಗೆ ಉತ್ತಮ ಸ್ಫೂರ್ತಿಯಾಗಿದ್ದಾರೆ ಎಂದು ವರ್ಣಿಸಿದ್ದಾರೆ.
Welcome back to Earth, Sunita Williams (@Astro_Suni) and Butch Wilmore (@astro_wilmore)! Glad to hear of your safe return after an incredible journey in space.
Your achievements are a testament to human perseverance and scientific excellence. Sunita Williams has been a great… pic.twitter.com/f45Ym9q3Vh
— Siddaramaiah (@siddaramaiah) March 19, 2025