ಹತ್ತಾರು ಯತಿಗಳಿಂದ ಈ ಕೈಂಕರ್ಯ ನೆರವೇರಿತು. ನೂರಾರು ಆಸ್ತಿಕರು ಕುಟುಂಬ ಸಮೇತ ಈ ಸಾಮೂಹಿಕ ಸುದರ್ಶನ ಹೋಮದಲ್ಲಿ ಭಾಗವಹಿಸಿ ಪುನೀತರಾದರು. ನಾಡಿನ ಒಳಿತಿಗಾಗಿ ನೆರವೇರಿದ ಈ ಪೂಜಾ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸಾಕ್ಷಿಯಾದರು.
ಸುದರ್ಶನ ಹೋಮದಿಂದ ಸುಖ ಸಮೃದ್ಧಿ..
ಸುದರ್ಶನ ಹೋಮವು ಅಗ್ನಿ ದೇವನನ್ನು ಒಳಗೊಂಡ ಹಿಂದೂ ಆಚರಣೆಯಾಗಿದ್ದು, ಸುದರ್ಶನ ಹೋಮದ ಕೈಂಕರ್ಯದಲ್ಲಿ ಭಾಗವಹಿಸುವುದರಿಂದ ನಕಾರಾತ್ಮಕತೆ ನಾಶವಾಗುತ್ತದೆ ಎಂಬುದು ಆಸ್ತಿಕರ ನಂಬಿಕೆ. ಹಿತಶತ್ರುಗಳ, ಅಹಿತ ಶತ್ರುಗಳ, ನೀಚಶತ್ರುಗಳ ಮೇಲೆ ವಿಜಯವನ್ನು ಈ ಸುದರ್ಶನ ಹೋಮ ಮೂಲಕ ಗಳಿಸಬಹುದು ಎಂಬ ನಂಬಿಕೆ ಇದೆ. ದುಷ್ಟ ದೃಷ್ಟಿಯಿಂದ ಪಾರಾಗಲು, ಈ ಹೋಮದ ಮೂಲಕ ಶುದ್ಧೀಕರಣ ಸಾಧ್ಯವೆನ್ಬುತ್ತಾರೆ ಧಾರ್ಮಿಕ ಪಂಡಿತರು.
ಶಕ್ತಿ ಮತ್ತು ಆರೋಗ್ಯ ಪುನಃಸ್ಥಾಪಿಸಲು, ಯಶಸ್ಸಿ ಉತ್ತೇಜನ ಈ ಹೋಮದಿಂದ ಸಾಧ್ಯವಿದೆ ಎಂಬುದೂ ನಂಬಿಕೆ. ಸುದರ್ಶನ ಹೋಮವು ವಿಷ್ಣುವಿನ ಪ್ರಮುಖ ಅತೀಂದ್ರಿಯ ಆಯುಧಗಳಲ್ಲಿ ಒಂದಾದ ಸುದರ್ಶನ ಚಕ್ರದೊಂದಿಗೆ ಸಂಬಂಧವನ್ನು ಹೊಂದಿದೆ ಎನ್ನಲಾಗುತ್ತಿದೆ.
ಲೋಕ ಹಿತಕ್ಕಾಗಿ ವಿಷ್ಣು ಯಾವಾಗಲೂ ತನ್ನ ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿರುತ್ತಾನೆ. ನಕಾರಾತ್ಮಕತೆಯ ನಾಶಕ್ಕಾಗಿ ವಿಷ್ಣು ಈ ಶಕ್ತಿಶಾಲಿ ಚಕ್ರವನ್ನು ಹಿಡಿದಿದ್ದಾನೆ. ಈ ಸುದರ್ಶನ ಚಕ್ರವು ದಶಲಕ್ಷ ಸೂರ್ಯ ಶಕ್ತಿಯನ್ನು ಹೊಂದಿರುವ ಪ್ರಬಲ ಆಯುಧವಾಗಿದೆ ಎಂಬ ನಂಬಿಕೆಯೂ ಇದೆ. ಈ ಸುದರ್ಶನ ಹೋಮ ಮೂಲಕ ಭಗವಂತ ವಿಷ್ಣು ಹಾಗೂ ಸುದರ್ಶನ ಸ್ವಾಮಿಯನ್ನು ಒಲೈಕೆ ಮಾಡಬಹುದು. ಈ ಕೈಂಕರ್ಯದಿಂದ ಇಡೀ ಕುಟುಂಬಕ್ಕೆ ಸುರಕ್ಷೆ ಆವರಿಸುತ್ತದೆ ಎಂಬುದು ಆಸ್ತಿಕರ ನಂಬಿಕೆ.