ರೈಲು ಚಲಿಸುತ್ತಿರುವಾಗ ಹತ್ತುವುದು, ಇಳಿಯುವುದು ಕಷ್ಟಸಾಧ್ಯ. ಇಲ್ಲೊಬ್ಬಳು ಹುಡುಗಿ ವೇಗವಾಗಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ರೈಲು ಹತ್ತಿ ಸ್ಟಂಟ್ ಪ್ರದರ್ಶಿಸಿದ್ದಾಳೆ. ಸ್ವಲ್ಪ ಎಡವಟ್ಟಾದರೂ ಪ್ರಾಣಕ್ಕೆ ಕುತ್ತು ಎದುರಾಗುತ್ತಿತ್ತು. ಶಾಲಾ ವಿದ್ಯಾರ್ಥಿನಿ ಜೊತೆಗಾರರ ಮುಂದೆ ಸಾಹಸ ಪ್ರದರ್ಶಿಸಲು ಈ ರೀತಿ ಕಸರತ್ತು ಮಾಡಿದ್ದಾಳೆನ್ನಲಾಗಿದೆ.
Watch: students performing stunt on train near #Chennai at Kavarapettai Railway station #TamilNadu @grpchennai @tnpoliceoffl @GMSRailway @dt_next
source: A Whatsapp forward pic.twitter.com/qeHO6O9BCg— Raghu VP / ரகு வி பி / രഘു വി പി (@Raghuvp99) November 25, 2021
ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಚಲಿಸುತ್ತಿರುವ ರೈಲಿನಲ್ಲಿ ನಡೆಸಿದ ಸಾಹಸ ನೋಡುಗರನ್ನು ಬೆಚ್ಚಿ ಬೀಳಿಸುವಂತಿದೆ. ಚೆನ್ನೈನ ಕವರಪೆಟ್ಟೈ ರೈಲು ನಿಲ್ದಾಣದಲ್ಲಿ ಈ ಸಾಹಸ ಪ್ರದರ್ಶನ ನಡೆದಿದೆ ಎನ್ನಲಾಗಿದೆ.