ಬೆಂಗಳೂರು: ಲೋಕಸಭಾ ಚುನಾವಣಾ ಆಖಾಡ ರಾಜಕೀಯ ಪಕ್ಷಗಳ ಜಿದ್ದಾಜೊದ್ದಿನ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಅಂಕುಶ ಹಾಕುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೇ ವೇಳೆ, ಶ್ರಮಿಕ ವರ್ಗವನ್ನು ಪ್ರತಿನಿಧಿಸುತ್ತರುವ ಸಂಘಟನೆಗಳು ಸೌಮ್ಯ ರೆಡ್ಡಿ ಅವರಿಗೆ ಬೆಂಬಲ ಘೋಷಿಸುವ ಮೀಲಕ ಅಚ್ಚರಿಯ ವಿದ್ಯಮಾನ ನಡೆದಿದೆ.
ಸುಮಾರು 32 ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ (ಆಟೋ, ಟ್ಯಾಕ್ಸಿ, ವ್ಯಾನ್, ಶಾಸಗಿ ಬಸ್ಸುಗಳು, ಶಾಲಾ ಬಸ್ಸುಗಳು ಸರಕು ಸಾಗಣೆ ವಾಹನಗಳು ಹಾಗೂ ಇತರೆ ಸರಕು ಸಾಗಣೆ ವಾಹನಗಳು) ಮತ್ತು ವಾಹನಗಳ ಮಾಲೀಕರು ಮತ್ತು ಚಾಲಕರ ಸಮೂಹ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಅವರಿಗೆ ಬೆಂಬಲ ಘೋಷಿಸಿವೆ.
ಪ್ರಮುಖ ಕ್ರಮಗಳಾದ ರ್ಯಾಪಿಡೋ ಬೈಕ್ ಟ್ಯಾಕ್ಸಿ ರದ್ಧತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.5.40 ಕೋಟಿ ವೆಚ್ಚದಲ್ಲಿ 2 ಇಂದಿರಾ ಕ್ಯಾಂಟೀನ್, ಅಗ್ರೀಗೇಟರ್ ಆ್ಯಪ್ Concept Note ತಯಾರಿ, ಅಸಂಘಟಿತ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಅದಕ್ಕಾಗಿ ಹಣ ಒದಗಿಸಲು ವಿಧಾನಸಭೆಯಿಂದ ಒಪ್ಪಿಗೆ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ, ಅಗ್ರಿಗೇಟರ್ ಲೈಸನ್ಸ್ ಹೊಂದಿರುವ ಓಲಾ/ ಊಬರ್ ಕಂಪನಿಗಳ ಡೈನಾಮಿಕ್ ದರ ರದ್ದು, ಹೀಗೆ ತಮ್ಮ 20 ಬೇಡಿಕೆಗಳನ್ನು ಅತ್ಯಲ್ಪ ಸಮಯದಲ್ಲಿ ಬಗೆಹರಿಸಿ, ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಗಳಿಗೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಚಿವರ ಪಾತ್ರ ಹಿರಿದಿದೆ. ಖಾಸಗಿ ಚಾಲಕರ ಹಾಗೂ ಕುಟುಂಬದವರಿಗೆ ಸಚಿವರು ನ್ಯಾಯ ಒದಗಿಸಿದ್ದಾರೆ ಎಂದು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ಪ್ರಮುಖರು ಹೇಳಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ರಘು, (ಅಧ್ಯಕ್ಷರು ಪೀಸ್ ಆಟೋ,), ಜಿ.ನಾರಾಯಣಸ್ವಾಮಿ
(ಅಧ್ಯಕ್ಷರು, ಕರ್ನಾಟಕ ಚಾಲಕರ ಒಕ್ಕೂಟ), ಸದಾನಂದ ಸ್ವಾಮಿ (ಅಧ್ಯಕ್ಷರು, ಇಂಡಿಯನ್ ವೆಹಿಕಲ್ ಟ್ರೇಡ್ ಯುನಿಯನ್) ಜಯಣ್ಣ (ಅಧ್ಯಕ್ಷರು ಭಾರತ್ ಟ್ರಾನ್ಸಪೊರ್ಟ ಅಸೋಸಿಯೆಶನ್ ), ಹಮೀದ್ (ಟ್ಯಾಕ್ಸಿ ಚಾಲಕರ ಸಂಘ) ಹಾಗೂ ಇತರೆ 32 ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸಾರಿದ್ದಾರೆ.