ಬೆಂಗಳೂರು: ಪ್ರಜಾಪ್ರಭುತ್ವದ ಕಗ್ಗೊಲೆಯಾದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆವಾಸದ ಶಿಕ್ಷೆ ಅನುಭವಿಸಿದ ಶ್ರೀಮತಿ ಗಾಯತ್ರಿ ಹನುಮಂತ ರಾವ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಭೇಟಿಯಾಗಿ ಗೌರವಿಸಿದರು.
ಉದರದಲ್ಲಿ ತನ್ನ ಮೊದಲನೆಯ ಮಗುವನ್ನು ಹೊತ್ತಿದ್ದ ಗಾಯತ್ರಿ ರಾವ್ ಅವರನ್ನು ತುಂಬು ಗರ್ಭಿಣಿ ಎನ್ನುವ ಪರಿಗಣೆಯನ್ನೂ ನೀಡದೆ ಅಂದಿನ ಇಂದಿರಾ ಗಾಂಧಿ ಸರ್ಕಾರ ಸೆರೆಮನೆಗೆ ತಳ್ಳಿತ್ತು. ಗಾಯತ್ರಿ ರಾವ್ ಅವರು ಸೆರೆಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದರು.
ಇಂತಹ ಲಕ್ಷಾಂತರ ಜನರನ್ನು ಅಂದಿನ ಇಂದಿರಾಗಾಂಧಿ ಸರಕಾರ ನಿರ್ದಯವಾಗಿ ಬಂಧಿಸಿ ಜೈಲಿಗಟ್ಟಿದರು, ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿತು.
ಆ ಕರಾಳ ದಿನವನ್ನು ಬಿಜೆಪಿ ಕಾರ್ಯಕರ್ತರು ತಮ್ನದೇ ರೀತಿಯಲ್ಲಿ ನೆನಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಗಾಯತ್ರಿ ರಾವ್ ಅವರನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ಸನ್ಮಾನಿಸಿದರು.