ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಸೋಮವಾರ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.
ಇದೇ ವೇಳೆ, ಚಿತ್ರೋದ್ಯಮದ ಪ್ರಮುಖರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಶಿವಣ್ಣನಿಗೆ ಶುಭ ಹಾರೈಸಿದ್ದಾರೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹ್ಯಾಟ್ರಿಕ್ ಹೀರೋಗೆ ನೀಡಿರುವ ಶುಭಾಶಯ ಗಮನಸೆಳೆದಿದೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ, ಹಿರಿಯ ಕಲಾವಿದ, ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಹ್ಯಾಟ್ರಿಕ್ ಹೀರೋ ನಮ್ನ ಶಿವಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಸದಾ ಆಯುರಾರೋಗ್ಯ ಕರುಣಿಸಲಿ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಕೊಡುಗೆ ತಮ್ಮಿಂದ ಸಲ್ಲಲಿ ಎಂದು ಹಾರೈಸಿ ವಿಜಯೇಂಂದ್ರ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ, ಹಿರಿಯ ಕಲಾವಿದ, ಕೋಟ್ಯಂತರ ಅಭಿಮಾನಿಗಳ ಅಚ್ಚುಮೆಚ್ಚಿನ ಹ್ಯಾಟ್ರಿಕ್ ಹೀರೋ ಶ್ರೀ @NimmaShivanna ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಸದಾ ಆಯುರಾರೋಗ್ಯ ಕರುಣಿಸಲಿ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಉತ್ತಮ ಕೊಡುಗೆ ತಮ್ಮಿಂದ ಸಲ್ಲಲಿ ಎಂದು ಹಾರೈಸುತ್ತೇನೆ. 💐 pic.twitter.com/8iDOrBAf1m
— Vijayendra Yediyurappa (Modi Ka Parivar) (@BYVijayendra) July 12, 2021