ಶಿವಮೊಗ್ಗ: ಕುವೆಂಪು ನಾಡಿನಲ್ಲಿ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆ ಮೊಳಗಿಸಿರುವ ಪ್ರಸಂಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಘಟನೆಯನ್ನು ಕನ್ನಡ ಪ್ರೇಮಿಗಳು ಖಂಡಿಸಿದ್ದಾರೆ. ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಧಾನಸಭಾ ಚುನಾವಣಾ ಕರ್ನಾಟಕ ಸಹ ಉಸ್ತುವಾರಿ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ಕನ್ನಡದ ನಾಡಗೀತೆಯ ಬದಲಾಗಿ ತಮಿಳು ನಾಡಗೀತೆ ಮೊಳಗಿದೆ. ಆಗ ಮುಖಂಡರು ಹಾಗೂ ಕಾರ್ಯಕರ್ತರು ಎದ್ದು ನಿಂತು ಗೌರವ ನೀಡಿದ್ದಾರೆ. ಈ ಪ್ರಸಂಗ ವಿವಾದಕ್ಕೀಡಾಗಬಹುದೆಂಬ ಸುಳಿವರಿತ ಮಾಜಿ ಸಚಿವ ಈಶ್ವರಪ್ಪ ಅವರು, ಕೂಡಲೇ ಮಧ್ಯಪ್ರವೇಶಿಸಿ ಕನ್ನಡ ನಾಡಗೀತೆಯನ್ನೂ ಹಾಡುವಂತೆ ಸಲಹೆ ಮುಂದಿಟ್ಟರು.
ಈ ಕುರಿತ ವೀಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಪ್ರತಿಪಕ್ಷ ಕಾಂಗ್ರೆಸ್, ‘ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧದ ನಿಲುವು ಹೊಂದಿದ್ದ ಅಣ್ಣಾಮಲೈ ಅವರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಬಿಜೆಪಿಯು ಕನ್ನಡಿಗರ ಸ್ವಾಭಿಮಾನವನ್ನು ಅಣಕವಾಡಿದೆ. ಈಗ ಅಣ್ಣಾಮಲೈ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ ಎಂದು ಟೀಕಿಸಿದೆ. ಬಿಜೆಪಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದೇಕೆ ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.
ಮೇಕೆದಾಟು ವಿಚಾರದಲ್ಲಿ ಕರ್ನಾಟಕದ ವಿರುದ್ಧದ ನಿಲುವು ಹೊಂದಿದ್ದ ಅಣ್ಣಾಮಲೈ ಅವರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿಯಾಗಿ ನೇಮಿಸುವ ಮೂಲಕ ಬಿಜೆಪಿ ಕನ್ನಡಿಗರ ಸ್ವಾಭಿಮಾನವನ್ನು ಅಣಕವಾಡಿದೆ.
ಈಗ ಅಣ್ಣಾಮಲೈ ಮೆಚ್ಚಿಸಲು ಕರ್ನಾಟಕದ ನಾಡಗೀತೆಯ ಬದಲು ತಮಿಳುನಾಡಿನ ನಾಡಗೀತೆ ಹಾಡಲಾಗಿದೆ.
ಬಿಜೆಪಿ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದೇಕೆ? pic.twitter.com/uvsT2IiJM1
— Karnataka Congress (@INCKarnataka) April 27, 2023
ಈ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಕನ್ನಡ ಸಂಘಟನೆಗಳ ಪ್ರಮುಖರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ನಾಯಕರ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ‘ಅಪ್ಪಟ ಕನ್ನಡಿಗರ ನಾಡು ಶಿವಮೊಗ್ಗ.. ಕುವೆಂಪು ಅವರ ನಾಡಿನಲ್ಲಿ ತಮಿಳು ನಾಡಗೀತೆ.. ಈಗ ಚುನಾವಣಾ ಸಮಯ ವೋಟ್‌ಗಾಗಿ ಏನ್ ಬೇಕೋ ಅದನ್ನು ಮಾಡಿ…’ ಎಂದು ಕಮಲ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಪ್ಪಟ ಕನ್ನಡಿಗರ ನಾಡು ಶಿವಮೊಗ್ಗ
ಕುವೆಂಪು ಅವರ ನಾಡಿನಲ್ಲಿ ತಮಿಳು ನಾಡಗೀತೆ…
ಈಗ ಚುನಾವಣಾ ಸಮಯ ವೋಟ್ ಗಾಗಿ ಏನ್ ಬೇಕೋ ಅದನ್ನು ಮಾಡಿ… pic.twitter.com/A5qAqCwDyt— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 27, 2023
‘ಕುವೆಂಪು ಹುಟ್ಟಿದ ನಾಡಿನಲ್ಲಿ ಇಂತಹ ನಾಡದ್ರೋಹಿ ಕೃತ್ಯ ಎಸಗಿದ ಬಿಜೆಪಿ ಪಕ್ಷವನ್ನು ಶಿವಮೊಗ್ಗದ ಸ್ವಾಭಿಮಾನಿ ಕನ್ನಡಿಗರು ತಿರಸ್ಕರಿಸಲೇಬೇಕು’ ಎಂಬ ಘೋಷಣೆಯೂ ಮಾರ್ಧನಿಸಿದೆ..
ಕುವೆಂಪು ಹುಟ್ಟಿದ ನಾಡಿನಲ್ಲಿ ಇಂತಹ ನಾಡದ್ರೋಹಿ ಕೃತ್ಯ ಎಸಗಿದ ಬಿಜೆಪಿ ಪಕ್ಷವನ್ನು ಶಿವಮೊಗ್ಗದ ಸ್ವಾಭಿಮಾನಿ ಕನ್ನಡಿಗರು ತಿರಸ್ಕರಿಸಲೇಬೇಕು.#SaveNandini #saynotonationalparties pic.twitter.com/egpqUKeGwf
— ರಾಷ್ಟ್ರೀಯ ಪಕ್ಷಗಳ ಮುಕ್ತ ಕರ್ನಾಟಕ (@NotoNatParties) April 27, 2023
ಇದೊಂದು ವಿಪರ್ಯಾಸ ಎಂದಿರುವ ನೆಟ್ಟಿಗರು, ಬಿಜೆಪಿಯನ್ನು ಸಹಿಸಿಕೊಂಡಿದ್ದಕ್ಕೆ, ತಮಿಳು ನಾಡಗೀತೆ ಹಾಕಿದ್ದಾರೆ. ಇನ್ನೂ ಹೀಗೆ ಇದ್ದರೆ – ನಮ್ಮ ನೆಲ, ಜಲ, ತಾಯಿ, ತಂದೆ, ನಮ್ಮ ಅಸ್ಮಿತೆ ಎಲ್ಲವನ್ನೂ ಮರೆತು ಅವರಿಗೆ ಜೈ ಹುಜೂರ್ ಎನ್ನಬೇಕಾಗುತ್ತದೆ. ಕನ್ನಡ ನಾಡಿನ ಮಕ್ಕಳಿಗೆ ಇಂಥ ಅನ್ಯಾಯ ಆಗಬಾರದಿತ್ತು’ ಎಂದು ಸಿಟ್ಟು ಹೊರಹಾಕಿದ್ದಾರೆ.
ಎಂಥಾ ವಿಪರ್ಯಾಸ..?
ಬಿಜೆಪಿಯನ್ನು ಸಹಿಸಿಕೊಂಡಿದ್ದಕ್ಕೆ, ತಮಿಳು ನಾಡಗೀತೆ ಹಾಕಿದ್ದಾರೆ..,
ಇನ್ನೂ ಹೀಗೆ ಇದ್ದರೆ – ನಮ್ಮ ನೆಲ, ಜಲ, ತಾಯಿ, ತಂದೆ, ನಮ್ಮ ಅಸ್ಮಿತೆ ಎಲ್ಲವನ್ನೂ ಮರೆತು ಅವರಿಗೆ ಜೈ ಹುಜೂರ್ ಎನ್ನಬೇಕಾಗುತ್ತದೆ.ಕನ್ನಡ ನಾಡಿನ ಮಕ್ಕಳಿಗೆ ಇಂಥ ಅನ್ಯಾಯ ಆಗಬಾರದಿತ್ತು. pic.twitter.com/NxLrg9gFTg
— mukund gowda (@nimmamukund) April 28, 2023
ಈ ನಡುವೆ, ಅದೇ ಕಾರ್ಯಕ್ರಮದಲ್ಲಿ ಕನ್ನಡ ನಾಡ ಗೀತೆಯನ್ನು ಹಾಡುವಂತೆ ಮಾಡಿದ ಮಾಜಿ ಸಚಿವ ಈಶ್ವರಪ್ಪ ಅವರ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಊರಲ್ಲಿ ತಮಿಳುನಾಡಿನ ಗೀತೆ ಹಾಡಿಸುತ್ತಾರೆ ಅಂದ್ರೆ ಇವ್ರು ನಾಳೆ ಇನ್ನೆನ್ನೆಲ್ಲ ಮಾಡಲ್ಲ ಹೇಳಿ!
ಅದು ಅಪ್ಪಟ ಕನ್ನಡಿಗರ ಜಾಗ@BJP4Karnataka ನಿಮ್ಗೆ ತಾಕತ್ತು ಇದ್ರೆ ಇದನ್ನೇ ತಮಿಳುನಾಡಿನಲ್ಲಿ ಕನ್ನಡ ನಾಡಗೀತೆ ಹಾಡಿಸಿ ನೋಡೋಣ?ನಿಮ್ ರಾಜಕೀಯದ ತೆವಲಿಗೆ ಈ ಕೀಳ ಮಟ್ಟಕ್ಕೆ ಇಳಿಬಾರ್ದು ಥೂ ನಿಮ್ ಜನ್ಮಕ್ಕೆ. pic.twitter.com/YLfFQvhU1O
— ಕಿರಿಕ್‌ಗೆ ಕಾರ‍್ತಿಕ್ l KIRIKge K@rTH!K 🟨🟥 (@VKkarthik169) April 27, 2023