ಹಜರತ್ ಸೈಯದ್ ಪೀರ್ ಜಮಲಾಶಾ ಖಾದಾರಿ (ಆರ್ಎ) ದರ್ಗಾದಲ್ಲಿ ಹಜರತ್ ಖವ್ಜಾ ಗರಿಬ್ ನವಾಜ್ (ಆರ್ಎ ) ಚಟ್ಟಿ ಷರೀಫ್ ಆಚಾರಣೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ ರಸ್ತೆಯ ದರ್ಗಾದಲ್ಲಿ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ಗಮನಸೆಳೆಯಿತು. ಹಜರತ್ ಸೈಯದ್ ಪೀರ್ ಜಮಲಾಶಾ ಖಾದಾರಿ (ಆರ್ ಎ) ದರ್ಗಾದಲ್ಲಿ ಬಹುತೇಕ ಉತ್ಸವಗಳು ಅದ್ದೂರಿಯಾಗಿ ನೆರವೇರುತ್ತದೆ. ಈ ಬಾರಿಯೂ ಪೆಬ್ರವರಿ 19ರಂದು ಹಜರತ್ ಖವ್ಜಾ ಗರಿಬ್ ನವಾಜ್ (ಆರ್ ಎ). ಚಟ್ಟಿ ಷರೀಫ್ ಆಚರಣೆಯ ಕೈಂಕರ್ಯದಲ್ಲಿ ನಾಡಿನ ಗಣ್ಯರನೇಕರು ಭಾಗವಹಿಸಿದ್ದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಬೆಂಗಳೂರಿನ ಬೆನ್ಸನ್ಟೌನ್ ಖಾದ್ರಿಯಾ ಮಸೀದಿ ಮತ್ತು ಶಿವಾಜಿನಗರದ ಜಾಮಾ ಮಸೀದಿಗಳ ಟ್ರಸ್ಟೀ ಉಸ್ಮಾನ್ ಷರೀಫ್, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಸುಭಾನ್ ಷರೀಫ್, ಅಬ್ದುಲ್ ರಹಮಾನ್, ಮುನೀರ್, ಬಿ.ಎ.ಸತ್ತಾರ್ ಹಾಗೂ ಸ್ಟಿಫನ್ ಸ್ವೇರ್ನ ಸದಸ್ಯರನೇಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು.