ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಅವರ ಮತ್ತೊಂದು ಚಿತ್ರ ಇದೀಗ ಸಿನಿ ರಸಿಕರ ಕುತೂಹಲದ ಕೇಂದ್ರಬಿಂದುವಾಗಿದೆ. ಬಗ್ಬಾಸ್ ಸ್ಪರ್ಧೆಯಲ್ಲಿ ಗೆಲುವಿನ ಉತ್ಸಾಹದಲ್ಲಿದ್ದ ಸಂಗೀತ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆದರೂ ‘ಗೆದ್ದಿರೋದು ನೀವೇ’ ಎಂದು ಅಭಿಮಾನಿಗಳು ಈ ನಟಿಗೆ ಸಮಾಧಾನಪಡಿಸಿದ್ದರು.
ಇದೀಗ ಸಂಗೀತ ಶೃಂಗೇರಿ ಅವರು ನಟ ದಿಗಂತ್ ಜೊತೆ ಅಭಿನಯಿಸಿರುವ ‘ಮಾರಿಗೋಲ್ಡ್’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಬಿಗ್ಬಾಸ್ ನಂತರದ ಮೊದಲ ಸಿನಿಮಾ ಇದಾಗಿದ್ದು ಸಂಗೀತ ಶೃಂಗೇರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಘವೇಂದ್ರ ನಾಯಕ್ ನಿರ್ದೇಶನದ ‘ಮಾರಿಗೋಲ್ಡ್’ ಟ್ರೈಲರ್ ಕೂಡಾ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.