ಸಿನಿಮಾ ಲೋಕದಲ್ಲಿ ತನ್ನದೇ ಆದ ಇತಿಹಾಸ ನಿರ್ಮಿಸಿರುವ ಚಿತ್ರ ‘ಸಂಜು ವೆಡ್ಸ್ ಗೀತಾ’. 2011ರಲ್ಲಿ ತೆರೆಕಂಡಿದ್ದ ಮಧುರ ಹಾಡುಗಳ ಕಣಜದಂತಿರುವ ‘ಸಂಜು ವೆಡ್ಸ್ ಗೀತಾ’ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಟಿಸಿರುವ ಈ ಚಿತ್ರಕ್ಕೆ ನಾಗಶೇಖರ್ ಅವರು ಆ್ಯಕ್ಷನ್ ಕಟ್ ಹೇಳಿದ್ದರು.
ಈಗಿನ ಪೀಳಿಗೆಯಲ್ಲಿ ಯಾವುದೇ ಸಿನಿಮಾ ಇರಲಿ ಮುಂದುವರಿದ ಭಾಗಗಳನ್ನು ನಿರ್ಮಿಸುವುದು ಸಾಮಾನ್ಯವಾಗಿದೆ. ಅದರಂತೆಯೇ ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಪಾರ್ಟ್-2 ಬರಬಾರಬಾರದೇಕೆ ಎಂಬ ಬಗ್ಗೆ ಪ್ರಶ್ನೆಗಳು ಕೇಳಿಬರುತ್ತಿದ್ದವು. ಈ ಪ್ರಶ್ನೆಗೆ ಹಲವಾರು ವರ್ಷಗಳಿಂದ ಉತ್ತರ ಸಿಕ್ಕಿರಲಿಲ್ಲ. ಇದೀಗ ಉತ್ತರ ಸಿಕ್ಕಿದೆ.
‘ಸಂಜು ವೆಡ್ಸ್ ಗೀತಾ’ ಸಿನಿಮಾದ ಮುಂದುವರಿದ ಭಾಗ ಸದ್ಯದಲ್ಲೇ ಸೆಟ್ಟೇರಲಿದೆಯಂತೆ. ಅಂದಹಾಗೆ ಈ ಚಿತ್ರದಲ್ಲಿ ನಾಯಕಿಯಾಗಿ ರಮ್ಯಾ ನಟಿಸುತ್ತಾರ? ಎಂಬ ಕುತೂಹಲ ಕೆರಳುವಂತಾಗಿದೆ. ಇದೇ ವೇಳೆ ನಟಿ ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ಈ ಎಲ್ಲಾ ಕುತೂಹಲಗಳಿಗೆ ಉತ್ತರ ಎಂಬಂತಿದೆ. ‘ಸಂಜು ವೆಡ್ಸ್ ಗೀತಾ’ ಸಿನಿಮಾದದಲ್ಲಿ ನಾಯಕಿಯಾಗಿ ನಟಿಸಿದ್ದ ರಮ್ಯಾ ಅವರ ಜಾಗವನ್ನು ‘ಸಂಜು ವೆಡ್ಸ್ ಗೀತಾ-2’ರಲ್ಲಿ ರಚಿತಾ ರಾಮ್ ತುಂಬಲಿದ್ದಾರೆ ಎಂದು ಗಾಂಧೀನಗರದ ಗಲ್ಲಿಗಳಲ್ಲಿ ಹರಿದಾಡುತ್ತಿರುವ ಮಾತುಗಳಿಗೆ ರಚಿತಾ ರಾಮ್ ಮಾಡಿರುವ ಪೋಸ್ಟ್ ಉತ್ತರ ಎಂಬಂತಿದೆ.
View this post on Instagram
‘ಸಂಜು ವೆಡ್ಸ್ ಗೀತಾ’ ಸಿನಿಮಾ ತಂಡವನ್ನು ರಚಿತಾ ರಾಮ್ ಅವರು ಸೇರಿಕೊಂಡಿದ್ದಾರೆ. ಈ ವಿಚಾರವನ್ನು ಅವರು ಈ ಮೂಲಕ ಘೋಷಣೆ ಮಾಡಿದ್ದು ಈ ಸುದ್ದಿಯಿಂದಾಗಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ.
ಈ ನಡುವೆ, ‘ಸಂಜು ವೆಡ್ಸ್ ಗೀತಾ-2’ ಚಿತ್ರದಲ್ಲೂ ರಮ್ಯಾ ಏಕಿಲ್ಲ ಎಂದು ಪ್ರಶ್ನಿಸಿರುವ ಮೋಹಕ ತಾರೆಯ ಅಭಿಮಾನಿಗಳು, ಇದು ‘ರಮ್ಯ Vs ರಚಿತ’ ಎಂಬ ಹೊಸ ಅಧ್ಯಾಯವೇ ಎಂದು ಪ್ರಶ್ನಿಸಿದ್ದಾರೆ.