ಪಾಲಕ್ಕಾಡ್: ಕೇರಳದಲ್ಲಿ ಆರ್.ಎಸ್.ಎಸ್. ಕಾರ್ಯಕರ್ತರ ಮಾರಣ ಹೋಮ ಮುಂದುವರಿದಿದೆ. ಕೇರಳದ ಮೊಂಬರಂನಲ್ಲಿ ನಾಲ್ವರು ಹಂತಕರ ತಂಡ ಆರ್‌ಎಸ್‌ಎಸ್ ಮುಖಂಡನನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿದೆ.
ಎಲಪ್ಪುಳ್ಳಿ ಸಮೀಪದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌಧಿಕ್ ಪ್ರಮುಖ್, 27 ವರ್ಷ ಹರೆಯದ ಸಂಜಿತ್ ಎಂಬವರನ್ನು ಹಂತಕರು ಕೊಲೆ ಮಾಡಿದ್ದಾರೆ. ಬೆಳಗ್ಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಈ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ಈ ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಸಂಘದ ಕಾರ್ಯಕರ್ತನ ಮೇಲಿನ ದಾಳಿಯನ್ನು ಹಿಂದೂ ಸಂಘಟನೆಗಳ ನಾಯಕರು ಹಾಗೂ ಬಿಜೆಪಿ ಧುರೀಣರು ಖಂಡಿಸಿದ್ದಾರೆ.