ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಸುವರ್ಣ ಸೌಧ ಬಳಿ ಶಕ್ತಿ ಪ್ರದರ್ಶನಕ್ಕೆ ತುಅರಿ ನಡೆದಿದೆ. ಈ ಸಂಬಂಧ ಪಂಚಮಸಾಲಿ ಸಮುದಾಯದ ವಿವಿಧ ಘಟಕಗಳು ಪೂರ್ವಭಾವಿ ತಯಾರಿಯಲ್ಲಿ ತೊಡಗಿವೆ. ಇದೇ ವೇಳೆ ನವಂಬರ್ 16 ಶನಿವಾರದಂದು ಹುಬ್ಬಳ್ಳಿಯಲ್ಲಿ ಸಮುದಾಯದ ಮುಖಂಡರ ಹಾಗೂ ವಕೀಲರ ಪೂರ್ವಭಾವಿ ಸಭೆ ನಡೆಯಲಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಪಂಚಮಸಾಲಿ ಸಮುದಾಯದ ಶ್ರೀಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಈ ಪೂರ್ವಭಾವಿ ಸಭೆಯಲ್ಲಿ ಹೋರಾಟದ ರೂಪುರೇಷೆ ಬಗ್ಗೆ ವರ್ಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಂಚಮಸಾಲಿ- ಮಲೆಗೌಡ ದೀಕ್ಷಾ- ಗೌಡ ಲಿಂಗಾಯತರಿಗೆ 2A ಹಾಗೂ ಲಿಂಗಾಯತ OBC ಮೀಸಲಾತಿಗೆ ಹಕ್ಕೊತ್ತಾಯಿಸಿ ಆರಂಭಗೊಂಡಿರುವ 7ನೇ ಹಂತದ ಚಳುವಳಿ ಇದಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿ.9 ರಂದು ಬೆಳಗಾವಿಯ ಸುವರ್ಣಾ ವಿಧಾನಸೌಧಕ್ಕೆ ಮುತ್ತಿಗೆ ಹಾಕಾಲಘುವುದು. ಪಂಚಮಸಾಲಿ ಸಮಾಜದಿಂದ ಹಾಗೂ ವಕೀಲರಿಂದ ಮುತ್ತಿಗೆ ಹಾಗೂ ಟ್ಯಾಕ್ಟರ್ Rally ನಡೆಸಲಾಗುವುದು ಎಂದು ಮಾಹಿತಿ ಒದಗಿಸಿದ್ದಾರೆ.