ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾನುವಾರ ಪದವಿ ಪ್ರದಾನ ಮಾಡುತ್ತಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರನ್ನು ವಿಕಲಚೇತನ ಅಭ್ಯರ್ಥಿಯೊಬ್ಬರು ಸೆಲ್ಫಿಗಾಗಿ ವಿನಂತಿಸಿದಾಗ ಸಚಿವರು ಖುದ್ದು ಸೆಲ್ಫಿ ತೆಗೆದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.


























































