ತಿರುವನಂತಪುರಂ: ಕೇರಳ ಬಿಜೆಪಿ ನೂತನ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಧಿಕಾರ ಸ್ವೀಕರಿಸಿದ್ದಾರೆ. ಸೋಮವಾರ ನಡೆದ ಸಮಾರಂಭದಲ್ಲಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
Historic moment!
Shri Rajeev Chandrashekhar ji took charge as the new state president of @BJP4Keralam. A new era of politics of development begins!
Under the leadership of @NarendraModi ji and @RajeevRC_X ji, BJP is poised to write new chapters in shaping Kerala’s future. pic.twitter.com/NleURsEbln
— Anoop Antony Joseph (@AnoopKaippalli) March 24, 2025
ತಿರುವನಂತಪುರದಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಕೇಂದ್ರ ವೀಕ್ಷಕರಾದ ಪ್ರಹ್ಲಾದ್ ಜೋಶಿ ಅವರು ರಾಜೀವ್ ಚಂದ್ರಶೇಖರ್ ಆಯ್ಕೆಯನ್ನು ಪ್ರಕಟಿಸಿದರು. ರಾಜೀವ್ ಚಂದ್ರಶೇಖರ್ ಅವರೊಬ್ಬರೇ ಭಾನುವಾರ ನಾಮಪತ್ರ ಸಲ್ಲಿಸಿದ್ದು ಅವರ ಆಯ್ಕೆಯನ್ನು ಸೋಮವಾರ ಪ್ರಕಟಿಸಲಾಯಿತು. ಅನಂತರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಕೇರಳ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರಾಜೀವ್ ಚಂದ್ರಶೇಖರ್ ಅವರನ್ನು ಅಭಿನಂಧಿಸಿರುವ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ‘ನಿಮ್ಮ ರಾಜಕೀಯ ಚಾತುರ್ಯ ಮತ್ತು ಬಲವಾದ ಸಂಘಟನೆಯು ಕೇರಳದ ರಾಜಕೀಯ ಭೂದೃಶ್ಯವನ್ನು ಖಂಡಿತವಾಗಿಯೂ ಬದಲಾಯಿಸುತ್ತದೆ’ ಎಂದು ಹೇಳಿದ್ದಾರೆ.
Congratulations Sri @RajeevRC_X on being elected as the State Predident of @BJP4Keralam . Your political acumen & strong organisation will change the political landscape of Kerala for sure.
Sri @surendranbjp , outgoing President needs a special mention for his commendable work. pic.twitter.com/yxlSCsE55G— B L Santhosh (@blsanthosh) March 24, 2025