ಬೆಂಗಳೂರು: ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆ ಪ್ರಯುಕ್ತ ರಾಜಭವನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ಭವನವನ್ನು ರಾಜಪಾಲ ವಜೂಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸ್ವಾಮಿವಿವೇಕಾನಂದ ಭವನದ ಪ್ರತಿಮೆ ಅನಾವರಣ ಹಾಗೂ ರಾಜಭವನದಿಂದ ಹೊರತಂದಿರುವ ಕರ್ನಾಟಕ ಕುರಿತ “A Visual Ode to Karnataka” ಪುಸ್ತಕ ಬಿಡುಗಡೆಯನ್ನು ನೆರವೇರಿಸಲಾಯಿತು.