ಮಂಡ್ಯ: ರೈತರ ಮನೆ ಬಾಗಿಲಿಗೆ ಸರ್ಕಾರ ತರುವ ಉದ್ದೇಶದಿಂದ ‘ರೈತರೊಂದಿಗೊಂದು ದಿನ’ ಆಯೋಜಿಸಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಮಾನ್ಯ ಜಿಲ್ಲೆ ಕೆ.ಆರ್.ಪೇಟೆ ಮಡುವಿನಕೋಡಿ ಗ್ರಾಮದಲ್ಲಿ ರೈತರೊಂದಿಗೆ ವಿಡಿಯೋ ಸಂವಾದ ನಡೆಸಿದ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಅನುಕೂಲ ಪರಿಸ್ಥಿತಿ ನಿರ್ಮಿಸವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದೆಂದು ತಿಳಿಸಿದರು.
ವೈಜ್ಞಾನಿಕ ಬೆಲೆ ಕೊಡುವುದಲ್ಲ; ರೈತನೇ ವೈಜ್ಞಾನಿಕ ಬೆಲೆಯನ್ನು ಸೃಷ್ಟಿಸಿಕೊಳ್ಳುವಂತಾಗಬೇಕು ಎಂದು ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬಿದ ಅವರು, ಎಫ್‌ಪಿಓಗಳ ಮೂಲಕ ಕೃಷಿ ಆಹಾರ ಉತ್ಪಾದನೆ ಸಂಸ್ಕರಣೆ ಉತ್ಪನ್ನಗಳನ್ನು ಖರೀದಿಸಲಾಗುತ್ತಿದೆ.ಸಮಗ್ರ ಕೃಷಿ ನೀತಿ ಅಳವಡಕೆ ರೈತರಿಗೆ ಸ್ವಾವಲಂಬಿ ಬದುಕು ನೀಡಬಹುದು ಎಂದರು.