ದೋಹಾ,: ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರದಿಂದ ಆಯೋಜಿಸಲಾದ ಅನನ್ಯ ಕಾರ್ಯಕ್ರಮದಲ್ಲಿ ಕನ್ನಡಿಗ ಮಹೇಶ್ ಗೌಡರನ್ನು ಸನ್ಮಾನಿಸಲಾಯಿತು
ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ಮಹೇಶ್ ಗೌಡ ಅವರನ್ನು ಕತಾರ್‌ನ ಭಾರತೀಯ ಸಂಸ್ಕೃತಿ ಕೇಂದ್ರವು (ಕತಾರ್‌ನ ಭಾರತದ ರಾಯಭಾರ ಕಚೇರಿ ಆಶ್ರಯದಲ್ಲಿ) 24 ಮೇ, ಐಸಿಸಿ ಅಶೋಕ್ ಹಾಲ್‌ನಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿತು.
ಭಾರತೀಯ ಸಮುದಾಯಕ್ಕೆ ಅವರ 15 ವರ್ಷಗಳ ಅಪಾರ ಸೇವೆಗೆ ಐಸಿಸಿ ಶ್ಲಾಘನೆ ವ್ಯಕ್ತಪಡಿಸಿದೆ. ಮಹೇಶ್ ಗೌಡರು ಕತಾರ್‌ನ ಭಾರತೀಯ ಸಮುದಾಯದಲ್ಲಿ ಚಿರಪರಿಚಿತ ವ್ಯಕ್ತಿ. ಇವರು ಸಂಸ್ಕೃತಿ ಕೇಂದ್ರದ ಅನೇಕ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ಚಾಚಿದವರು, ಕರೋನಾ ಪರಿಹಾರ ಕಾರ್ಯದ ಸೇವೆಗಾಗಿ ಭಾರತದ ರಾಯಭಾರ ಕಚೇರಿಯಿಂದ ಅವರನ್ನು ಕೋವಿಡ್ ವಾರಿಯರ್ ಎಂದು ಪ್ರಶಂಸೆ ನೀಡಲಾಗಿತ್ತು. ಪತ್ನಿ ಶ್ರೀಮತಿ ಸುಮಾ ಮಹೇಶ್ ಗೌಡ ಮತ್ತು ಅವರ ಇಬ್ಬರು ಮಕ್ಕಳಾದ ದಿಯಾ ಮಹೇಶ್ ಮತ್ತು ಅರ್ಜುನ್ ಗೌಡ ಅವರ ಬೆಂಬಲ ಹಾಗೂ ಶಕ್ತಿಯನ್ನು ನೀಡಿದ್ದಕ್ಕೆ ಐಸಿಸಿ ಅಭಿನಂದಿಸಿದೆ.
ಈ ಕಾರ್ಯಕ್ರಮದಲ್ಲಿ ಐಸಿಸಿ ಅಧ್ಯಕ್ಷ ಎ.ಪಿ.ಮಣಿಕಂಠನ್, ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.