ಬೆಂಗಳೂರು: ರಾಜ್ಯದಲ್ಲಿ 545 PSI ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸರಕಾರವು ಮಹತ್ವದ ನಿರ್ಧಾರ ವೊಂದನ್ನು ತೆಗೆದುಕೊಂಡಿದ್ದು, ಈ ಸಂಬಂಧ ನಡೆಸಲಾಗಿದ್ದ ಪರೀಕ್ಷೆ ಯನ್ನು ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲಿದೆ
ಮಾಧ್ಯಮ ಗೋಷ್ಠಿಯಲ್ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಈ ವಿಷಯ ತಿಳಿಸಿ, ಈ ಹಿಂದೆ ಪರೀಕ್ಷೆ ಬರೆದಿದ್ದ ಎಲ್ಲಾ 54289 ಪರೀಕ್ಷಾರ್ಥಿ ಗಳು ಮತ್ತೂಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ ಎಂದರು. ಆದರೆ ಸಿಐಡಿ ಯಿಂದ ಬಂಧಿತರಾದ ಅಭ್ಯರ್ಥಿಗಳಿಗೆ ಮರು ಪರೀಕ್ಷೆಯಿಂದ ಹೊರಗಿಡಲಾಗುವುದು.
ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಗೊಳಿ ಸಲಾಗುವುದು ಎಂದ ಅವರು, ಮರು ಪರೀಕ್ಷೆ ನಿರ್ಧಾರದಿಂದ, ಅಕ್ರಮವಾಗಿ ನೇಮಕಾತಿ ಪಡೆದವರ ಜಾಗಕ್ಕೆ, ಪ್ರತಿಭಾವಂತ ಹಾಗೂ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅವಕಾಶ ದೊರಕಲಿದೆ, ಎಂದು ತಿಳಿಸಿದರು.
ಪರೀಕ್ಷಾ ಅಕ್ರಮಗಳು ಒಂದಕ್ಕಿಂತ ಹೆಚ್ಚು ಕೇಂದ್ರಗಳಲ್ಲಿ ನಡೆದಿದೆ ಎಂಬ ಬಗ್ಗೆಯೂ ಅನುಮಾನಗಳಿದ್ದು , ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಸರಕಾರ ತೆಗೆದುಕೊಳ್ಳಲಾಯಿತು, ಎಂದು ಸಚಿವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಇಂಥಹ ಅಕ್ರಮಗಳು ನಡೆಯದಂತೆ ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಬಗ್ಗೆಯೂ ಅಲೋಚಿಸಲಾಗುವುದು, ಎಂದು ಸಚಿವರು ನುಡಿದರು.