ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮಹತ್ವದ ಅವಕಾಶ ಒದಗಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 1000 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಾತಿ ಪ್ರಕಟಿಸಲಾಗಿದೆ.
ಈ ನೇಮಕಾತಿ ಮೂಲಕ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನಲ್ಲಿ ಅಧಿಕಾರಿ ಹುದ್ದೆಯಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಆಕರ್ಷಕ ವೇತನ, ವೃತ್ತಿಜೀವನದ ಬೆಳವಣಿಗೆ ಹಾಗೂ ಸ್ಥಿರ ಉದ್ಯೋಗ ಈ ಹುದ್ದೆಗಳ ವಿಶೇಷತೆಗಳಾಗಿವೆ.
ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:
- ಕರ್ನಾಟಕ: 60 ಹುದ್ದೆಗಳು
- ಉತ್ತರ ಪ್ರದೇಶ: 200 ಹುದ್ದೆಗಳು
- ಗುಜರಾತ್: 125 ಹುದ್ದೆಗಳು
- ಪಂಜಾಬ್: 100 ಹುದ್ದೆಗಳು
- ಛತ್ತೀಸ್‌ಗಢ: 80 ಹುದ್ದೆಗಳು
- ಒಡಿಶಾ: 80 ಹುದ್ದೆಗಳು
- ತಮಿಳುನಾಡು: 65 ಹುದ್ದೆಗಳು
- ಮಧ್ಯಪ್ರದೇಶ: 60 ಹುದ್ದೆಗಳು
- ಮಹಾರಾಷ್ಟ್ರ: 60 ಹುದ್ದೆಗಳು
- ಅಸ್ಸಾಂ: 50 ಹುದ್ದೆಗಳು
- ತೆಲಂಗಾಣ: 30 ಹುದ್ದೆಗಳು
- ಪಶ್ಚಿಮ ಬಂಗಾಳ: 30 ಹುದ್ದೆಗಳು
- ಹಿಮಾಚಲ ಪ್ರದೇಶ: 20 ಹುದ್ದೆಗಳು
- ಅರುಣಾಚಲ ಪ್ರದೇಶ: 15 ಹುದ್ದೆಗಳು
- ಜಾರ್ಖಂಡ್: 10 ಹುದ್ದೆಗಳು
- ಕೇರಳ: 10 ಹುದ್ದೆಗಳು
- ನಾಗಾಲ್ಯಾಂಡ್: 5 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಕನಿಷ್ಠ 18 ತಿಂಗಳ ಬ್ಯಾಂಕಿಂಗ್ ಅನುಭವ ಅಗತ್ಯವಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಪರಿಣತಿ ಹೊಂದಿರಬೇಕು.
ವಯೋಮಿತಿ 20 ರಿಂದ 30 ವರ್ಷಗಳ ನಡುವೆ ನಿಗದಿಯಾಗಿದ್ದು, ಸರ್ಕಾರದ ನಿಯಮಾನುಸಾರ ವಿವಿಧ ವರ್ಗಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ 48,480ರಿಂದ 85,920 ರೂ.ವರೆಗೆ ವೇತನಶ್ರೇಣಿ ನೀಡಲಾಗುತ್ತದೆ. ಜೊತೆಗೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಿರುತ್ತವೆ.
ಅರ್ಜಿ ಶುಲ್ಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನರಿಗೆ 100 ರೂ., ಇತರರಿಗೆ 850 ರೂ. ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಮುಂದಿನ ಹಂತಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ನೇಮಕಾತಿ ವಿವರ https://punjabandsind.bank.in/content/recruitment ವೆಬ್ಸೈಟ್ ನಲ್ಲಿ ಲಭ್ಯ






















































