ಬೆಂಗಳೂರು: ಇತಿಹಾಸದಲ್ಲಿಯೇ ಕಂಡು ಕೇಳರಿಯದಂತಹ ಲೈಂಗಿಕ ಹಗರಣ ಕರ್ನಾಟಕದ ಹಾಸನದಲ್ಲಿ ನಡೆದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವ ಘಟನೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಜಂಟಿ ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. pic.twitter.com/waAMGyv1gA
— Karnataka Congress (@INCKarnataka) May 2, 2024
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿದ ಉಗ್ರಪ್ಪ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಆಕ್ಷೇಪಿಸಿದರು. ಹೊಳೆನರಸಿಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಅವರು ಸುಮಾರು ನಾಲ್ಕು ತಿಂಗಳ ಹಿಂದೆ ಮಾಧ್ಯಮ ಗೋಷ್ಠಿ ನಡೆಸಿ ಪ್ರಜ್ವಲ್ ರೇವಣ್ಣ ಅವರ ಸಿಡಿಗಳು ಇವೆ ಎಂದು ಮಾಹಿತಿ ನೀಡಿದ್ದರು. ಈ ವಿಚಾರವಾಗಿ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವುದು ಎಂದು ಹೇಳಿದ್ದರು ಎಂದು ಉಗ್ರಪ್ಪ ಗಮನಸೆಳೆದರು.
ಐಪಿಸಿ ಸೆಕ್ಷನ್ 202 ಪ್ರಕಾರ ಕಾನೂನು ವಿರುದ್ದ ನಡೆದುಕೊಂಡಿದ್ದರೆ ಹಾಗೂ ಅದನ್ನು ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡದೆ ಇದ್ದರೆ ಅಪರಾಧವಾಗುತ್ತದೆ. ಕಾರು ಚಾಲಕ ಕಾರ್ತಿಕ್ ನಾನೇ ದೇವರಾಜೇಗೌಡ ಅವರಿಗೆ ವಿಡಿಯೋಗಳನ್ನು ನೀಡಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾನೆ ಎಂದ ಅವರು, ದೇವರಾಜೇಗೌಡರಿಗೆ ಮಾಹಿತಿ ಇದ್ದರೂ ಸಹ ಈ ಕೃತ್ಯದ ಬಗ್ಗೆ ಸ್ಥಳೀಯ ಪೊಲೀಸ್ ಸ್ಟೇಷನ್ ಗೆ ಏಕೆ ತಿಳಿಸಿಲ್ಲ. ಇದು ಕಾನೂನಿನ ಉಲ್ಲಂಘನೆ. ಈ ವಿಚಾರದ ಬಗ್ಗೆ ಬಿಜೆಪಿ- ಜೆಡಿಎಸ್ ನಾಯಕರಿಗೆ ಮಾಹಿತಿ ಇದ್ದರೂ ತಿಳಿಸದೇ ಇರುವುದು ಕೂಡ ಕಾನೂನು ಉಲ್ಲಂಘನೆಯಾಗಿದೆ ಎಂದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಹೋಗಲು ವೀಸಾ ನೀಡಿದ್ದು ಯಾರು? ವೀಸಾ ನೀಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಎಂದ ಉಗ್ರಪ್ಪ, ಮಹಿಳಾ ದೌರ್ಜನ್ಯ ಕುರಿತು ಎರಡು ವರದಿಗಳಿವೆ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಮಾಡಿದ ಜಸ್ಟೀಸ್ ವರ್ಮಾ ಸಮಿತಿ ಹಾಗೂ ನಾನು ಅಧ್ಯಕ್ಷನಾಗಿದ್ದಾಗ ನೀಡಿದ ವರದಿಗಳು ಈ ದೇಶದಲ್ಲಿ ಇವೆ.ಲ ಎಂದರು.
ನಿರ್ಭಯಾ ಪ್ರಕರಣದಲ್ಲಿ ಬಿಜೆಪಿಯವರು ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಅಪವಾದ ಮಾಡಿದರು. ಈ ರೀತಿಯ ಶೋಷಣೆಗೆ ಒಳಗಾದ ಮಹಿಳೆಯರಿಗೆ ಪರಿಹಾರ ನೀಡಬೇಕು ಹಾಗೂ ಈ ರೀತಿಯ ಘಟನೆಗಳನ್ನು ತಡೆಯಲು ಇಡಿ ದೇಶದಾದ್ಯಂತ ಜಾಗೃತಿ ಕಾರ್ಯಕ್ರಮಗಳ ನಡೆಸಬೇಕು ಎಂದು ವರ್ಮಾ ಸಮಿತಿ ಶಿಫಾರಸ್ಸು ಮಾಡಿತ್ತು ಎಂದ ಉಗ್ರಪ್ಪ, ಬಿಜೆಪಿ ಮತ್ತು ಜೆಡಿಎಸ್ ಅವರು ಈ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತವಾದ ಸಂಚು ನಡೆಯುತ್ತಿದೆ. ನಡೆಸಿದೆ. ತೂಗುವ ಕತ್ತಿಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎನ್ನುವಂತೆ. ಈ ಪ್ರಕರಣದ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಕೆಸರು ಎರಚುವಂತಹ ಕೆಲಸ ಮಾಡಲಾಗುತ್ತಿದ ಬಿಜೆಪಿಯವರು ವರ್ಮಾ ಆಯೋಗದ ಶಿಫಾರಸ್ಸುಗಳನ್ನು ಓದಿ ಆನಂತರ ಕಾಂಗ್ರೆಸ್ ವಿಚಾರ ಮಾತನಾಡಬೇಕು ಎಂದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುವ ಬಿಜೆಪಿಯವರೇ ದೇಶದ ಆಡಳಿತ ನಿಮ್ಮ ಕೈಯಲ್ಲಿ ಇರುವಾಗ ನೀವು ತೆಗೆದುಕೊಂಡಿರುವ ಕ್ರಮವೇನು? ಎಂದು ಪ್ರಶ್ನಿಸಿದ ಅವರು, ದೇವರಾಜೇಗೌಡ ಹಲವಾರು ಬಾರಿ ವಿಡಿಯೋ ಇದೆ ಎಂದಾಗಲೂ ಬಿಜೆಪಿ- ಜೆಡಿಎಸ್ ಅವರು ಏನು ಮಾಡಿದರು. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಪಟ್ಟ ಬಿಜೆಪಿ ವಿರುದ್ದವೂ ಎಸ್ ಐಟಿ ತನಿಖೆಯಾಗಬೇಕು. ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು. ವಿಕೃತಿ ಮೆರೆದಿರುವ ತಪ್ಪಿತಸ್ಥನಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಪಾದಿಸಿದರು.
























































