. ‘ಸೆಲ್ಯೂಟ್ ಟು ಕೊರೋನಾ ವಾರಿಯರ್ಸ್’ – ಇಲ್ಲಿದೆ ವೀಡಿಯೋ ವಿಶೇಷ
ಕೊರೋನಾ ಸಂಕಟ ಕಾಲದಲ್ಲಿ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ಸೋಂಕಿನ ವೇಗ ನಿಯಂತ್ರಿಸಲಾಗದ ಪರಿಸ್ಥಿತಿ ತಲುಪಿದಾಗ ಖಾಕಿ ಸೈನ್ಯ ಪಟ್ಟ ಪರದಾಟವೂ ಅಷ್ಟಿಷ್ಟಲ್ಲ. ಇದೀಗ ಸೋಂಕಿನ ವೇಗ ತಗ್ಗಿದ್ದು ಪೊಲೀಸರೂ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಇದೇ ಹೊತ್ತಿಗೆ ಸಂಧಿಕಾಲದ ಆಪತ್ಪಾಂಧವರ ಕೆಲಸವನ್ನು ಸ್ಮರಿಸುವ ಪ್ರಯತ್ನವೊಂದು ಕಡಲ ತಡಿಯ ಕ್ರಿಯಾಶೀಲ ಯುವಕರಿಂದ ನಡೆದಿದೆ. ಈ ಸಂಬಂಧದ ಸಾಕ್ಷ್ಯಚಿತ್ರ ಮಾದರಿಯ ವೀಡಿಯೋ ತುಣುಕು ನಾಡಿನ ಗಮನಸೆಳೆದಿದೆ. ಪೊಲೀಸ್ ಸ್ಟೋರಿಯ ಈ ವೀಡಿಯೋದಲ್ಲಿ ಮಂಗಳೂರು ಪೊಲೀಸ್ ಸೈನ್ಯದ ದಂಡನಾಯಕ ಶಶಿಕುಮಾರ್ ಅವರೇ ಹೀರೋ..
ನಿಷ್ಠೆಗೆ ಹೆಸರಾಗಿದ್ದ ಹುತಾತ್ಮ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಆಗಾಗ್ಗೆ ಐಪಿಎಸ್ ಅಧಿಕಾರಿ ಶಶಿಕುಮಾರ್ ಕಾರ್ಯವೈಖರಿ ಬಗ್ಗೆ ಖುಷಿ ಹಂಚಿಕೊಳ್ಳುತ್ತಿದ್ದರು. ಅದಾಗಲೇ ಬಳ್ಳಾರಿ ಎಎಸ್ಪಿಯಾಗಿದ್ದ ಇವರ ನಡೆ ಹಲವರ ಅಚ್ಚರಿಗೂ ಕಾರಣವಾಗಿತ್ತು. ಮಧುಕರ್ ಶೆಟ್ಟಿಯವರು ಶಶಿಕುಮಾರ್ ಅವರನ್ನು ಜನಸ್ನೇಹಿ ಎಸ್ಪಿ ಎಂದೇ ಬಣ್ಣಿಸುತ್ತಿದ್ದರು. ಪಾತಕ ಲೋಕದ ಕಾರಸ್ಥಾನ ಮಂಗಳೂರು ಬದಲಾಗಬೇಕಾದರೆ ಸಮರ್ಥ ಅಧಿಕಾರಿ ಬರಬೇಕು ಎಂದು ಕರಾವಳಿ ಮೂಲದವರೇ ಆದ ಮಧುಕರ್ ಶೆಟ್ಟಿ ಹೇಳುತ್ತಲೇ ಇದ್ದರು. ಇದೀದ ಅವರ ನೆಚ್ಚಿನ ಶಿಷ್ಯ ಶಶಿಕುಮಾರ್ ಕಮೀಷನರ್ ಆಗಿ ಮಂಗಳೂರಿನ ಚಿತ್ರಣವನ್ನೇ ಬದಲಿಸಿದ್ದಾರೆ.
On International Day Against Drug Abuse and Illicit Trafficking ,following guidance of DG&IGP Praveen Sood Sir,we have destroyed drugs seized in 50 cases of past 3 years. 130 kg Marijuana,MDMA tablets,Brown sugar,Cocaine and LSD strips worth lakhs were destroyed in this bonfire . pic.twitter.com/LfPsvRh7lx
— Shashi Kumar CP mangaluru (@ShashiK85532199) June 26, 2021
ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ರೌಡಿ ಚಟುವಟಿಕೆಗಳಿಗೆ ಅಂಕುಶ ಹಾಕಿದ್ದ ಈ ಕಮೀಷನರ್ ಸಾರಥ್ಯದ ಖಾಕಿ ತಂಡ, ಡ್ರಗ್ಸ್ ಮಾಫಿಯಾ ವಿರುದ್ದವೂ ಸಮರ ನಿರತವಾಗಿದೆ. ಎಜುಕೇಶನ್ ಹಬ್ ಖ್ಯಾತಿಯ ಕರಾವಳಿಯನ್ನು ಮಾದಕ ಪ್ರಪಂಚದ ಅಡ್ಡೆಯಾಗಿಸುವ ಪಾತಕಿಗಳ ಪ್ರಯತ್ನಕ್ಕೆ ಬ್ರೇಕ್ ಹಾಕುವಲ್ಲಿ ಈ ಐಪಿಎಸ್ ಶಶಿಕುಮಾರ್ ಪಾತ್ರ ಪ್ರಶಂಸೆಗೆ ಪಾತ್ರವಾಗಿದೆ. ಕೆಲವು ದಿನಗಳ ಹಿಂದೆ ನಕ್ಸಲ್ ಪ್ರಪಂಚದ ನಂಟಿನ ಮಾದಕ ವಸ್ತು ಜಾಲದ ಮೂಲ ಪತ್ತೆಹಚ್ಚಿದ ನಂತರವಂತೂ ಮಂಗಳೂರು ಪೊಲೀಸರ ಬಗ್ಗೆ ಇಡೀ ರಾಷ್ಟ್ರವೇ ಕೊಂಡಾಡಿದೆ.
ಈ ಸಂದರ್ಭದಲ್ಲೇ ಮಂಗಳೂರು ಪೊಲೀಸ್ ಹಾಗೂ ಕಮಿಷನರ್ ಶಶಿಕುಮಾರ್ ಅವರ ಸೇವಾಶೈಲಿ ಕುರಿತ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ.