ಮಂಗಳೂರು: ರಾಜ್ಯ ಕರಾವಳಿಯಲ್ಲಿ ಜಾನುವಾರುಗಳ ಕಳ್ಳ ಸಾಗಣೆ ಪ್ರಕರಣಗಳಿಗೆ ಕಡಿವಾಣ ಬಿದ್ದಂತಿಲ್ಲ. ಉಡುಪಿ ಸಮೀಪದ ಮರವಂತೆ ಕಡಲ ತೀರದ ಬಳಿ ಅಕ್ರಮವಾಗಿ ಜಾನುವಾರಗಳನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ತಡೆದಿರುವ ಪೊಲೀಸರು 18 ಜಾನುವಾರಗಳನ್ನು ರಕ್ಷಿಸಿದ್ದಾರೆ.
ಜಾನುವಾರುಗಳ ಕಳ್ಳಸಾಗಣೆ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಕುಂದಾಪುರ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಬೈಂದೂರು ಠಾಣೆಯ ಪೊಲೀಸರು ಗಂಗೊಳ್ಳಿ ಬಳಿ ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಬೆಳಕಿಗೆ ಬಂದಿದೆ.
ಜಾನುವಾರು ಕಳ್ಳರ ಕೃತ್ಯಕ್ಕೆ ಎರಡು ಜಾನುವಾರು ಬಲಿಯಾಗಿದ್ದರೆ, ಇನ್ನುಳಿದ ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಹಾರಾಷ್ಟ್ರದಿಂದ ಈ ಜಾನುವಾರುಗಳನ್ನು ಕಳ್ಳ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು ಪ್ರಕರಣ ಸಂಬಂಧ ಪೊಲೀಸರು ಹಾಸನದ ನಜಾರುಲ್ಲಾ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.