ಬ್ಯಾಂಕಿಂಗ್ ಹಬ್ ಎಂದೇ ಗುರುತಾಗಿದ್ದ ಬಂದರು ನಗರಿ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕಾಶಿಯಾಗಿಯೂ ಗಮನ ಸೆಳೆಯಿತ್ತಿದೆ. ಅದಕ್ಕೆ ಸಾಕ್ಷಿ ಎಂಬಂತಿದೆ ರಾಜ್ಯದ ಪ್ರತಿಷ್ಟಿತ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸಾಧನೆ.
ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2020ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಅಂತಿಮ ‘ಫಾರ್ಮಾ.ಡಿ’ ಪರೀಕ್ಷೆಯಲ್ಲಿ ಬಹುತೇಕ ರ್‍ಯಾಂಕ್’ಗಳನ್ನು ಕರಾವಳಿ ಶಿಕ್ಷಣ ಸಂಸ್ಥೆ ಬಾಚಿಕೊಂಡಿದೆ. ಮಂಗಳೂರು ಹೊರವಲಯದ ವಾಮಂಜೂರಿನಲ್ಲಿರುವ ಕರಾವಳಿ ಫಾರ್ಮಸಿ ಕಾಲೇಜು ವಿದ್ಯಾರ್ಥಿಗಳು ಬರೋಬ್ಬರಿ 28 ರ್‍ಯಾಂಕ್’ಗಳನ್ನು ಗಳಿಸಿ ಇಡೀ ರಾಜ್ಯದ ಗಮನಸೆಳೆದಿದ್ದಾರೆ.
ಕಳೆದ ತಿಂಗಳಷ್ಟೇ ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ್ದ 2020ರ ಬಿಎಸ್‌ಸಿ ಫ್ಯಾಶನ್ ಡಿಸೈನ್ ಪದವಿ ಪರೀಕ್ಷೆಗಳಲ್ಲಿ ಕರಾವಳಿ ಕಾಲೇಜು ಶೇಕಡಾ 100 ಫಲಿತಾಂಶ ಗಿಟ್ಟಿಸಿಕೊಂಡು ಶೈಕ್ಷಣಿಕ ದಾಖಲೆಯನ್ನು ಮುಂದುವರಿಸಿಕೊಂಡು ಬಂದ ಕೀರ್ತಿಗೆ ಪಾತ್ರವಾಗಿತ್ತು. ಇದೀಗ ಫಾರ್ಮಾ.ಡಿ ಪರೀಕ್ಷೆಯಲ್ಲೂ ಬರೋಬ್ಬರಿ 28 ರ್‍ಯಾಂಕ್’ಗಳನ್ನು ಇದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬಾಚಿಕೊಳ್ಳುವ ಮೂಲಕ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಮತ್ತಷ್ಟು ಗರಿ ಇಟ್ಟಂತಾಗಿದೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದಾರೆ.
ರ್‍ಯಾಂಕ್ ವಿವರ ಹೀಗಿದೆ:
- ಅಭಿಶ್ರೀ ಎಸ್: ಐದು ವರ್ಷಗಳ ಪದವಿಯಲ್ಲಿ 4ನೇ ರ್‍ಯಾಂಕ್. ಹಾಗೂ ಕ್ಲಿನಿಕಲ್ ರಿಸರ್ಚ್‌ನಲ್ಲಿ 4ನೇ ರ್‍ಯಾಂಕ್’, ಕ್ಲಿನಿಕಲ್ ಫಾರ್ಮಕೋಕೆನಿಟಿಕ್ಸ್ ಆ್ಯಂಡ್ ಫಾರ್ಮಕೋತೆರಾಪುಟಿಕ್ಸ್ ಡ್ರಗ್ ಮಾನಿಟರಿಂಗ್‌ನಲ್ಲಿ 10ನೇ ರ್‍ಯಾಂಕ್, ಕ್ಲರ್ಕ್‌ಶಿಪ್‌ನಲ್ಲಿ 3ನೇ ರ್‍ಯಾಂಕ್ ಹಾಗೂ ಪ್ರಾಜೆಕ್ಟ್ ವರ್ಕ್‌ನಲ್ಲಿ 5ನೇ ರ್‍ಯಾಂಕ್ ಗಳಿಸಿದ್ದಾರೆ.
- ನಿಮಿತ ವಸಂತ್: ಐದು ವರ್ಷಗಳ ಪದವಿಯಲ್ಲಿ 5ನೇ ರ್‍ಯಾಂಕ್, ಕ್ಲಿನಿಕಲ್ ರಿಸರ್ಚ್‌ನಲ್ಲಿ 4ನೇ ರ್‍ಯಾಂಕ್, ಫಾರ್ಮಕೋ ಎಪಿಡಮೋಲಜಿ ಆ್ಯಂಡ್ ಫಾರ್ಮಕೋ ಎಕನಾಮಿಕ್ಸ್‌ನಲ್ಲಿ 9ನೇ ರ್‍ಯಾಂಕ್, ಕ್ಲರ್ಕ್‌ಶಿಪ್‌ನಲ್ಲಿ 4ನೇ ರ್‍ಯಾಂಕ್ ಹಾಗೂ ಪ್ರಾಜೆಕ್ಟ್ ವರ್ಕ್‌ನಲ್ಲಿ 6ನೇ ರ್‍ಯಾಂಕ್ ಗಳಿಸಿದ್ದಾರೆ.
- ಸುಧಾಂಶು ಕೆ.ತಂತ್ರಿ: ಐದು ವರ್ಷಗಳ ಪದವಿಯಲ್ಲಿ 9ನೇ ರ್‍ಯಾಂಕ್. ಹಾಗೂ ಕ್ಲಿನಿಕಲ್ ರಿಸರ್ಚ್‌ನಲ್ಲಿ 8ನೇ ರ್‍ಯಾಂಕ್, ಕ್ಲಿನಿಕಲ್ ಫಾರ್ಮಕೋಕೆನಿಟಿಕ್ಸ್ ಆ್ಯಂಡ್ ಫಾರ್ಮಕೋತೆರಾಪುಟಿಕ್ಸ್ ಡ್ರಗ್ ಮಾನಿಟರಿಂಗ್‌ನಲ್ಲಿ 9ನೇ ರ್‍ಯಾಂಕ್, ಕ್ಲರ್ಕ್‌ಶಿಪ್‌ನಲ್ಲಿ 2ನೇ ರ್‍ಯಾಂಕ್ ಹಾಗೂ ಪ್ರಾಜೆಕ್ಟ್ ವರ್ಕ್‌ನಲ್ಲಿ 5ನೇ ರ್‍ಯಾಂಕ್ ಗಳಿಸಿದ್ದಾರೆ.
- ಕೌಶಿಕ್ ಶೆಟ್ಟಿ: ಕ್ಲಿನಿಕಲ್ ರಿಸರ್ಚ್‌ನಲ್ಲಿ 8ನೇ ರ್‍ಯಾಂಕ್, ಕ್ಲರ್ಕ್‌ಶಿಪ್‌ನಲ್ಲಿ 4ನೇ ರ್‍ಯಾಂಕ್ ಹಾಗೂ ಪ್ರಾಜೆಕ್ಟ್ ವರ್ಕ್‌ನಲ್ಲಿ 6ನೇ ರ್‍ಯಾಂಕ್
- ಶೆಬಿ ಎಲ್ಸಾ ಜಾರ್ಜ್: ಕ್ಲರ್ಕ್‌ಶಿಪ್‌ನಲ್ಲಿ 4ನೇ ರ್‍ಯಾಂಕ್ ಹಾಗೂ ಪ್ರಾಜೆಕ್ಟ್ ವರ್ಕ್‌ನಲ್ಲಿ 6ನೇ ರ್‍ಯಾಂಕ್,
- ಶೆಬಾ ಎಲ್ಸಾ ಶಾಜಿ: ಕ್ಲರ್ಕ್‌ಶಿಪ್‌ನಲ್ಲಿ 4ನೇ ರ್‍ಯಾಂಕ್,
- ಸ್ನೇಹಾ ಸಾರಾ ಜಾನ್: ಕ್ಲರ್ಕ್‌ಶಿಪ್‌ನಲ್ಲಿ 5ನೇ ರ್‍ಯಾಂಕ್,
- ವಹಿದೇ ರೆಸಗೋಲಿ ಬೇಗಿ: ಕ್ಲರ್ಕ್‌ಶಿಪ್‌ನಲ್ಲಿ 8ನೇ ರ್‍ಯಾಂಕ್,
- ಜಾನ್ ಮರ್ಲೇಕಿ ಸುಂಗ್ಹೋ: ಕ್ಲರ್ಕ್‌ಶಿಪ್‌ನಲ್ಲಿ 9ನೇ ರ್‍ಯಾಂಕ್,
- ರುಹಾನಾ: ಕ್ಲರ್ಕ್‌ಶಿಪ್‌ನಲ್ಲಿ 2ನೇ ರ್‍ಯಾಂಕ್,
- ಅನುಶಾ ಎಚ್: ಕ್ಲರ್ಕ್‌ಶಿಪ್‌ನಲ್ಲಿ 9ನೇ ರ್‍ಯಾಂಕ್,
- ಶೈಮಾ ಶಬನ್: ಕ್ಲರ್ಕ್‌ಶಿಪ್‌ನಲ್ಲಿ 10ನೇ ರ್‍ಯಾಂಕ್,
- ವರ್ಣಸಸಿ ಎಂ.ಪಿ.: ಕ್ಲರ್ಕ್‌ಶಿಪ್‌ನಲ್ಲಿ 9ನೇ ರ್‍ಯಾಂಕ್.
ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಇತ್ತೀಚೆಗಷ್ಟೇ ಪ್ರಕಟಿಸಿದ್ದ ಎಂ.ಫಾರ್ಮ ಪರೀಕ್ಷೆಯಲ್ಲೂ ಕರಾವಳಿ ಕಾಲೇಜ್ ಆಫ್ ಫಾರ್ಮಸಿ ಶೇಕಡಾ ನೂರು ಫಲಿತಾಂಶ ಪಡೆದು ಪ್ರತಿಷ್ಠೆಯನ್ನು ಉಳಿಸಿಕೊಂಡಿತ್ತು.
ಸಾಧನೆಯ ಚೈತ್ರಯಾತ್ರೆ
ಶಿಕ್ಷಣ ತಜ್ಞ ಕೂಡಾ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2020ರಲ್ಲಿ ನಡೆಸಿದ ಅಂತಿಮ ವರ್ಷದ ಎಂಬಿಎ ಪರೀಕ್ಷೆಯಲ್ಲೂ ಶೇಕಡಾ ನೂರು ಫಲಿತಾಂಶ ಪಡೆದು ಸರ್ವಶ್ರೇಷ್ಠ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಲಿಕೆಗೆ ಪಾತ್ರವಾಗಿತ್ತು. ಇದೀಗ ಫಾರ್ಮಾ.ಡಿ ಫಲಿತಾಂಶದಲ್ಲಿ ಬರೋಬ್ಬರಿ 28 ರ್‍ಯಾಂಕ್’ಗಳನ್ನು ಗಳಿಸುವ ಮೂಲಕ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ತನ್ನ ಚೈತ್ರ ಯಾತ್ರೆಯನ್ನು ಮುಂದುವರಿಸಿರುವುದು ವಿದ್ಯಾರ್ಥಿ ಸಮೂಹದ ಸಂತಸಕ್ಕೆ ಕಾರಣವಾಗಿದೆ.