ದೆಹಲಿ; ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೆರವಣಿಗೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಕೋಳ ತೊಡಿಸಿ ಅವಮಾನಿಸಿದ ಅಣಕು ಸನ್ನಿವೇಶ ಬಗ್ಗೆ ಹರಿದಾಡುತ್ತಿರುವ ವೀಡಿಯೋ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ. ಇಂತಹಾ ಆಕ್ಷೇಪಾರ್ಹ ಚಿಂತನೆಯುಳ್ಳ ಸಂಘಟನೆಯ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಅಭಿಪ್ರಾಯ ಮಂಡಿಸಿದ್ದಾರೆ.
ಇದನ್ನೂ ಓದಿ.. ಆರೆಸ್ಸೆಸ್ ಬಗ್ಗೆ ಕೀಳು ಮಟ್ಟದ ಅವಮಾನ.. ಆ ವೀಡಿಯೋದಲ್ಲೇನಿದೆ ಗೊತ್ತಾ..?
ಕೇರಳದಲ್ಲಿನ ಪಿಎಫ್‌ಐನ ಈ ವಿವಾದಾತ್ಮಕ ಕಾರ್ಯಕ್ರಮದ ಬಗ್ಗೆ ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉದಯ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಪಿಎಫ್ಐ ನಡೆಯನ್ನು ಉಗ್ರವಾಗಿ ಖಂಡಿಸಿದರು. ಇಂತಹಾ ಪ್ರಸಂಗಗಳು ನಮ್ಮ ದೇಶದಲ್ಲಿ ಈಗಿನದ್ದೇಲ್ಲ, 7ನೇ ಶತಮಾನದಿಂದಲೂ ಆಕ್ರಮಣಕಾರಿ ಮನಸ್ಥಿತಿಯುಳ್ಳವರು ಈ ರೀತಿಯ ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಘಜನಿ, ಘೋರಿ, ಬಾಬರ್ ಸಹಿತ ಅನೇಕರು ಹಾಗೂ ಅವರ ಅನುಯಾಯಿಗಳು ಈ ರೀತಿಯಲ್ಲೇ ನಡೆದುಕೊಂಡಿದ್ದರು. ಅವರನ್ನೇ ಅನುಸರಿಸುತ್ತಿರುವವರು ಈಗಲೂ ಅದೇ ರೀತಿ ಅಮಾನವೀಯ ಹಾದಿಯಲ್ಲಿದ್ದಾರೆ ಎಂದು ಸಿ.ಟಿ.ರವಿ ವಿಶ್ಲೇಷಿಸಿದರು.
ಆರೆಸ್ಸೆಸ್ ಸಂಘಟನೆ ಎಂದೂ ಯಾವುದೇ ಧರ್ಮದ ವಿರೂಧಿಯಾಗಿ ನಡೆದುಕೊಂಡಿಲ್ಲ. ದೃಶ ಭಕ್ತಿಯ ಶಿಕ್ಷಣ ನೀಡಿ ನಗುನಗುತ್ತಲೇ ಜನರಲ್ಲಿ ಒಗ್ಗಟ್ಟು ಮೂಡಿಸಿ ದೇಶ ಕಟ್ಟುತ್ತಿದೆ. ಇದನ್ನು ಸಹಿಸಲಾಗದವರು ಈ ರೀತಿ ದೇಶವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.
ಸರ್ಕಾರ ಕ್ರಮ ಕೈಗೊಳ್ಳಲಿ:
ದೇಶ ಕಟ್ಟುವ ಕೆಲಸಕ್ಕೆ ಅಡ್ಡಿಪಡಿಸುವುದನ್ನು ಸಹಿಸಲಾಗದು ಎಂದಿರುವ ಸಿ.ಟಿ.ರವಿ, ಮಂಗಳೂರು ಘಟನೆಯನ್ನಾಧರಿಸಿ ಕರ್ನಾಟಕ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಿರುವುದು ಸರಿಯಾದ ಕ್ರಮವಾಗಿದೆ. ಅದೇ ರೀತಿ ಕೇರಳ ಸರ್ಕಾರವೂ ಕ್ರಮ ಕೈಗೊಳ್ಳಬೇಕಿದೆ ಎಂದಿದ್ದಾರೆ.