ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ವಿಧಿವಶರಾಗಿದ್ದಾರೆ. ಮಾಜಿ ಸೇನಾ ಮುಖ್ಯಸ್ಥರಾಗಿದ್ದ ಅವರು ಹಲವು ವರ್ಷಗಳ ಕಾಲ ಪಾಕಿಸ್ತಾನದ ಅದ್ಯಕ್ಷರಾಗಿದ್ದರು. 70 ವರ್ಷ ಹರೆಯದ ಅವರು ಸುದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ಅವರು ಯುಎಇ ಯಲ್ಲಿರುವ ಅಮೆರಿಕನ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಮುಷರಫ್ ಅವರು, 1999 ರಿಂದ 2008ರವರೆಗೆ ಅಲ್ಲಿನ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಸರ್ವಾಧಿಕಾರ ಮೂಲಕ ಸಂವಿಧಾನವನ್ನು ಅಮಾನತು ಮಾಡಿದ ಆರೋಪ ಬಗ್ಗೆ ಅವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಈ ಸಂಬಂಧ 2019ರಲ್ಲಿ ಮರಣ ದಂಡನೆ ತೀರ್ಪು ಪ್ರಕಟವಾಗಿತ್ತು. ಬದಲಾದ ನಿರ್ದಾರದ ಮೂಲಕ ಅವರು ಆ ಶಿಕ್ಷೆಯಿಂದ ಪಾರಾದರು.
ಈ ನಡುವೆ, ಪಾಕಿಸ್ತಾನ ತೊರೆದು ದುಬೈಗೆ ಸ್ಥಳಾಂತರವಾಗಿದ್ದ ಪರ್ವೇಜ್ ಮುಷರಫ್ ಅವರು ಸುದೀರ್ಘ ಕಾಲದ ಅನಾರೋಗ್ಯದ ನಂತರ ವಿಧಿವಶರಾಗಿದ್ದಾರೆ.