ಛತ್ತೀಸ್ ಗಢ: ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಭರ್ಜರಿಯಾಗಿ ಸಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಸೋಮವಾರ ಛತ್ತೀಸ್‌ಗಢ ರಾಜ್ಯದ ಕೊರ್ಬಾ ಜಿಲ್ಲೆಯಲ್ಲಿ ಸಾಗಿದೆ.
ಈ ಯಾತ್ರೆ ಸಾಗಿದ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಪರವಾಗಿ ಯುವಕರ ಗುಂಪು ಘೋಷಣೆ ಕೂಗಿದೆ. ಯುವಕರ ನಡೆ ರಾಹುಲ್ ಗಾಂಧಿಯವರನ್ನು ಟೀಕಿಸುವ ಕ್ರಮವಾಗಿತ್ತಾದರೂ ಕಾಂಗ್ರೆಸ್ ನಾಯಕ ವಿಚಲಿತರಾಗಲಿಲ್ಲ. ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗುತ್ತಿದ್ದ ಜನಸಮೂಹದತ್ತ ಹೋಗಿ ಅವರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಪ್ರೀತಿಯಲ್ಲಿ ದೊಡ್ಡ ಶಕ್ತಿ ಇದೆ’ ಎಂದು ಹೇಳಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
मोहब्बत में बहुत ताकत होती है ❤️
BJP के कार्यकर्ता #BharatJodoNyayYatra का विरोध करने के लिए खड़े थे।
लेकिन जब यात्रा वहां से गुजरी और जननायक @RahulGandhi जी उनसे मिले, तो नजारा कुछ यूं बना 👇 pic.twitter.com/jEyt4B5CmA
— Congress (@INCIndia) February 12, 2024




























































