ನವದೆಹಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಗಾಸಸ್ ಗೂಢಾಚರ್ಯೆ ವಿವಾದ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಈ ವಿವಾದವನ್ನು ಮುಂದಿಟ್ಟು ಕೇಂದ್ರದಲ್ಲಿರುವ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಕಾಂಗ್ರೆಸ್‌ನಿಂದ ನಡೆದಿದೆ. ಬಿಜೆಪಿಯೇತರ ಸರ್ಕಾರವನ್ನು ಫೋನ್ ಕದ್ದಾಲಿಕೆಯ ಗೂಢಾಚರ್ಯೆ ಮೂಲಕ ಬೀಳಿಸಲಾಗಿದೆ ಕೈ ನಾಯಕರು ದೂರಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಆರೋಪಗಳ ಸುರಿಮಳೆಗೈದರು.
LIVE: Special Congress Party Briefing by Shri @kharge, Shri @adhirrcinc, Shri @kcvenugopalmp, Shri @rssurjewala, Shri @siddaramaiah & Shri @DKShivakumar at AICC HQ https://t.co/FuarPw4WL1
— Congress (@INCIndia) July 20, 2021
ಕರ್ನಾಟಕದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಲಾಗಿದೆ. 2019ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪೆಗಾಸಸ್ ಮೂಲಕ ಫೋನ್ ಕದ್ದಾಲಿಕೆ ಮಾಡಿ ಸರ್ಕಾರವನ್ನು ಕೆಡವಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿಸಲು ಗೂಢಾಚಾರಿಕೆ ಮಾಡುವ ಮೂಲಕ, ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮೋದಿ ಸರ್ಕಾರ ಬುಡಮೇಲು ಮಾಡಿದೆ ಎಂದು ರಣದೀಪ್ ಸುರ್ಜೇವಾಲಾ ಆರೋಪಿಸಿದರು.
ಇದೇ ವೇಳೆ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವೆಂಕಟೇಶ್, ಡಿಸಿಎಂ ಆಗಿದ್ದ ಜಿ. ಪರಮೇಶ್ವರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಗನ್ ಮ್ಯಾನ್ ಫೋನ್ ಕೂಡಾ ಕದ್ದಾಲಿಸಲಾಗಿದೆ ಎಂದು ಈ ನಾಯಕರು ದೂರಿದರು.