ಪ್ಯಾರಿಸ್: ಪ್ಯಾರಿಸ್ ನಗರ 33ನೇ ಒಲಿಂಪಿಕ್ಸ್ 2024 ಮಹಾಹಬ್ಬಕ್ಕೆ ಸಾಕ್ಷಿಯಾಗುತ್ತಿದೆ. ಜಾಗತಿಕ ಕ್ರೀಡಾಕೂಟಕ್ಕೆ ಮುನ್ನುಡಿ ಬರೆಯಲಾಗಿದೆ.
ಪ್ಯಾರಿಸ್‌ನಲ್ಲಿ ನಡೆದ 33ನೇ ಒಲಿಂಪಿಕ್ಸ್ 2024ಉದ್ಘಾಟನಾ ಸಮಾರಂಭ ವಿಶ್ವದ ಗಮನಸೆಳೆಯಿತು. ವರ್ಣರಂಜಿತ ಸಮಾರಂಭದಲ್ಲಿ 200ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಭಾಗಿಯಾಗಿ ಸಂಭ್ಯಮಕ್ಕೆ ಆಕರ್ಷಣೆ ತುಂಬಿದರು.
India… India!!! 🇮🇳
And this is how the entry of our Indian contingent looked at the #ParisOlympics2024 #OpeningCeremony !
Wishing every Indian athlete the very best for the #Paris2024 !
Everyone, do #Cheer4India.. pic.twitter.com/qNg3CVCD9O— Devendra Fadnavis (@Dev_Fadnavis) July 26, 2024
‘ಪರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಕ್ರೀಡಾಪಟುಗಳು ಸೀನ್ ನದಿಯಲ್ಲಿ ದೋಣಿಗಳಲ್ಲಿ ಪ್ರಯಾಣಿಸಿ ಕುತೂಹಲದ ಕೇಂದ್ರ ಬಿಂದುವಾದರು.
ಇದೀಗ ಮೂರನೇ ಬಾರಿ ಒಲಿಂಪಿಕ್ಸ್ ಆತಿಥ್ಯವಹಿಸಿರುವ ಪ್ಯಾರಿಸ್, ಈ ಹಿಂದೆ 1900 ಮತ್ತು 1924 ರಲ್ಲಿ ಯಶಸ್ವೀ ಕ್ರೀಡಾ ಹಬ್ಬ ಆಚರಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.