ಬೆಂಗಳೂರು: ಹೊಸವರ್ಷಾರಣೆ ಸಂದರ್ಭದಲ್ಲೇ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಫಲಿತಾಂಶವನ್ನು ಬಗೆಬಗೆಯಲ್ಲಿ ವಿಶ್ಲೇಶಿಸಲಾಗುತ್ತಿದೆ.
ಇದೇ ವೇಳೆ, ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ನಾಯಕರಿಗೆ ಜೆಡಿಎಸ್ ನಾಯಕರೂ ಆದ ಉದ್ಯಮಿ ಬಾಗೇಗೌಡರು ತಮ್ಮದೇ ಶೈಲಿಯಲ್ಲಿ ಅಭಿನಂದಿಸಿದ್ದಾರೆ.
ಫಲಿತಾಂಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಾಗೇಗೌಡರು, ಪಂಚಾಯ್ತಿಯಲ್ಲಿನ ಗೆಲುವೇ ಸಮಾಜ ಪರಿವರ್ತನಾ ಕಾರ್ಯಕ್ಕೆ ವೇದಿಕೆಯಾಗಿರುತ್ತದೆ. ಗ್ರಾಮದಲ್ಲೇ ರಾಮರಾಜ್ಯ ಕಟ್ಟುವ ಕೆಲಸ ಮಾಡಲು ನಿಮಗೆ ಅವಕಾಶ ಸಿಕ್ಕಿದ್ದು ಜನಹಿತ ಕೆಲಸದಲ್ಲಿ ಯಶಸ್ವಿಯಾಗಿ ಎಂದು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ವೇಳೆ, ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಜನಸೇವೆಯ ಅವಕಾಶ ದೂರವಾಗಿದೆ ಎಂದು ತಿಳಿಯಬಾರದು. ಅನೇಕ ರಾಷ್ಟ್ರ ನಾಯಕರೂ ಸೋತು ಗೆದದವರೇ ಆಗಿದ್ದಾರೆ ಎಂದು ಅವರು ವೀರೋಚಿತ ಸೋಲುಂಡವರಿಗೆ ಸಾಂತ್ವಾನ ಹೇಳಿದ್ದಾರೆ.
ನೂತನ ವರ್ಷವನ್ನು ಸಂತಸದಿಂದಲೇ ಸ್ವಾಗತಿಸೋಣ ಎಂದು ಬಾಗೇಗೌಡರು ನಾಡಿನ ಜನತೆಗೆ ಹೊಸವರ್ಷದ ಶುಭಾಶಯ ಕೋರಿದ್ದಾರೆ.