ಬೆಂಗಳೂರು: ಸಮಾಜ ಘಾತುಕ ಶಕ್ತಿಗಳ ಬೇಟೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಬೆಳ್ಳಂಬೆಳಿಗ್ಗೆ ದೇಶದ ಹಲವೆಡೆ ಕಾರ್ಯಾಚರಣೆ ಕೈಗೊಂಡಿತು.
ಇಸಿಸ್ ಭಯೋತ್ಪಾದನೆ ಸಂಚು ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಎನ್‌ಐಎ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ 44 ಕಡೆ ದಾಳಿ ನಡೆಸಿದೆ. ಕರ್ನಾಟಕದ 1, ಪುಣೆಯ 2, ಥಾಣೆ ನಗರದಲ್ಲಿ ಒಂಬತ್ತು, ಥಾಣೆ ಗ್ರಾಮಾಂತರದಲ್ಲಿ 31, ಮತ್ತು ಮುಂಬೈಯ ಭಾಯಂದರ್‌ನ ಒಂದು ಕಡೆ ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಶಂಕಿತರ ಅಡ್ಡೆಗೆ ಲಗ್ಗೆ ಹಾಕಿದ ಎನ್‌ಐಎ, ಪುಲಿಕೇಶೀ ನಗರದ ಓರ್ವ ಶಂಕಿತ ಸೇರಿ 13 ಮಂದಿಯನ್ನು ಬಂಧನಕ್ಕೊಳಪಡಿಸಿದೆ.







































































