ದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಸಹಿತ 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಈ ಬಾರಿ ಕಳೆದುಕೊಳ್ಳುವುದಕ್ಕಿಂತ ಗಳಿಸುವುದೇ ಹೆಚ್ಚು ಎಂಬ ಸಂತಸ ಬಿಜೆಪಿ ನಾಯಕರದ್ದು.
ವಿವಿಧ ಏಜೆನ್ಸಿಗಳು ನಢಸಿರುವ ಎಕ್ಸಿಟ್ ಪೋಲ್ ಫಲಿತಾಂಶ ಸೋಲು ಗೆಲುವಿನ ಲೆಕ್ಕಾಚಾರಕ್ಕೆ ರೋಚಕತೆ ತುಂಬಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂಬ ಸುಳಿವು ಕಮಲ ಕಾರ್ಯಕರ್ತರ ಸಂಭ್ರಮವನ್ನು ಹೆಚ್ಚಿಸಿದೆ. ಕಮ್ಯುನಿಸ್ಟರ ನಾಡು ಎಂದೇ ಗುರುತಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಆದರೆ ಮೋಡಿ ಮೋಡಿಯು ಆ ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಿಸಿರುವುದು ಅಚ್ಚರಿಯ ಬೆಳವಣಿಗೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- ಟಿಎಂಸಿ + : 142 – 152
- ಎನ್ಡಿಎ + : 16 – 26
- ಎಡರಂಗ + : 125 – 135
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ :
- ಟಿಎಂಸಿ + : 126 – 136
- ಎನ್ಡಿಎ + : 02 – 08
- ಎಡರಂಗ + : 138 – 148
-
ಟೈಮ್ಸ್‌ನೌ-ಸಿಓಟರ್ ಸಮೀಕ್ಷೆ :
- ಟಿಎಂಸಿ + : 158
- ಎನ್ಡಿಎ + : 19
- ಎಡರಂಗ + : 115
- ಇತರೆ : 2
ಅಸ್ಸಾಂನಲ್ಲಿ ಎನ್‌ಡಿಎ ಮೇಲುಗೈ?
ಅಸ್ಸಾಂನಲ್ಲಿ ಎನ್‌ಡಿಎ ಮಿತ್ರಕೂಟ ಅಧಿಕಾರ ರಚಿಸುವ ಸಾಧ್ಯತೆಗಳೇ ಹೆಚ್ಚು. ಅಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಸುಳಿವನ್ನು ಈ ಎಕ್ಸಿಟ್ ಪೋಲ್ ಫಲಿತಾಂಶ ಹೇಳುತ್ತಿದೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- BJP + : 59-69
- CONG + : 55-65
- AJP + : 00
- Others: 01-03
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ :
- BJP + : 74-84
- CONG + : 40-50
- AJP + : 00
- Others: 01-03
-
ಟೈಮ್ಸ್‌ನೌ-ಸಿಓಟರ್ ಸಮೀಕ್ಷೆ:
- BJP + : 65
- CONG + : 59
- AJP + : 00
- Others: 02
-
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
- BJP + : 75-85
- CONG + : 40-50
- AJP + : 00
- Others: 01-04
-
ಎಬಿಪಿ-ಸಿಓಟರ್ ಸಮೀಕ್ಷೆ:
- BJP + : 58-71
- CONG + : 53-66
- AJP + : 00
- Others: 00-05
ಪಾಂಡಿಚೇರಿಯಲ್ಲೂ ಎನ್‌ಡಿಎಗೆ ಬಲ?
ಪಾಂಡಿಚೇರಿಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಗೆ ವಿಜಯಮಾಲೆ ಒಲಿಯುವ ಸಾಧ್ಯತೆಗಳು ಗೋಚರಿಸಿವೆ. ಈವರೆಗೆ ಕೈ ಪಾಳಯದ ಹಿಡಿತದಲ್ಲಿದ್ದ ಪುದುಚೇರಿಯಲ್ಲಿ ಈಬಾರಿ ಬಿಜೆಪಿ-ಎಐಎಡಿಎಂಕೆ ಕೆಮಿಸ್ಟ್ರಿ ವರ್ಕ್ ಆಗಿದೆ ಎಂಬುದು ರಾಜಕೀಯ ಪಂಡಿತರ ವಿಷ್ಲೇಷಣೆ.
-
Tv9-ಪೋಲ್‌ಸ್ಟಾರ್ಟ್ ಸಮೀಕ್ಷೆ:
- CONG+ : 11-13
- BJP + : 17-19
- AMMK + : 00
- Others: 00
-
ರಿಪಬ್ಲಿಕ್-ಸಿಎನ್‌ಎಕ್ಸ್ ಸಮೀಕ್ಷೆ:
- CONG+ : 11-13
- BJP + : 16-20
- AMMK + : 00
- Others: 00
-
ಎಬಿಪಿ-ಸಿಓಟರ್ ಸಮೀಕ್ಷೆ:
- CONG+ : 06-10
- BJP + : 19-22
- AMMK + : 00
- Others: 01-02
ಈ ಮತಗಟ್ಟೆ ಸಮೀಕ್ಷೆಗಳನ್ನಾಧರಿಸಿ ಸೋಲುಗೆಲುವಿನ ಲೆಕ್ಕಾಚಾರ ಸಾಗಿದ್ದು ಮತೆಣಿಕೆಯ ನಂತರವಷ್ಟೇ ಸ್ಪಷ್ಟ ಫಲಿತಾಂಶ ಸಿಗಲಿದೆ.