ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಆರಂಭವಾಗಲಿರುವ 4 ವರ್ಷಗಳ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು 1 ವರ್ಷಕ್ಕೆ ಸೀಮಿತಗೊಳಿಸುವ ಉನ್ನತ ಶಿಕ್ಷಣ ಸಮಿತಿಯ ಪ್ರಸ್ತಾವ ನಿರಾಸೆ ತಂದಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.. ಕನ್ನಡ ಭಾಷಾ ಕಲಿಕೆ ಅದೊಂದು ವಿಷಯ ಮಾತ್ರವಲ್ಲ, ಯುವ ಸಮುದಾಯದಲ್ಲಿ ಸಾಕ್ಷಿಪ್ರಜ್ಞೆ ಬಿತ್ತುವ, ಅವರನ್ನು ಸೂಕ್ಷ್ಮಮತಿಗಳನ್ನಾಗಿ ಮಾಡುವ ಯಶಸ್ವಿ ಪ್ರಯತ್ನ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಆರಂಭವಾಗಲಿರುವ 4 ವರ್ಷಗಳ ಪದವಿಯಲ್ಲಿ ಕನ್ನಡ ಭಾಷಾ ಕಲಿಕೆಯನ್ನು 1 ವರ್ಷಕ್ಕೆ ಸೀಮಿತಗೊಳಿಸುವ ಉನ್ನತ ಶಿಕ್ಷಣ ಸಮಿತಿಯ ಪ್ರಸ್ತಾವ ನಿರಾಸೆ ತಂದಿದೆ. ಕನ್ನಡ ಭಾಷಾ ಕಲಿಕೆ ಅದೊಂದು ವಿಷಯ ಮಾತ್ರವಲ್ಲ, ಯುವ ಸಮುದಾಯದಲ್ಲಿ ಸಾಕ್ಷಿಪ್ರಜ್ಞೆ ಬಿತ್ತುವ,ಅವರನ್ನು ಸೂಕ್ಷ್ಮಮತಿಗಳನ್ನಾಗಿ ಮಾಡುವ ಯಶಸ್ವಿ ಪ್ರಯತ್ನ.
1/2— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 19, 2021
ರಕ್ತಕ್ಕೆ ಅಂಟಿದ ಭಾಷೆ ಕಲಿಕೆಯನ್ನು 1 ವರ್ಷಕ್ಕೆ ಮಿತಿಗೊಳಿಸುವುದು ಅವೈಜ್ಞಾನಿಕ. ಈ ಬಗ್ಗೆ ಡಿಸಿಎಂ ಅಶ್ವತ್ಥನಾರಾಯಣ್ ಅವರು ಸ್ಪಷ್ಟನೆ ನೀಡಿದ್ದಾರೆ. ಈಗಿನ ವ್ಯವಸ್ಥೆಯಂತೆ 2 ವರ್ಷದ ಕನ್ನಡ ಕಲಿಕೆಗೆ ತೊಂದರೆ ಇಲ್ಲ ಎಂದು ಹೇಳಿರುವುದು ಸ್ವಲ್ಪ ಸಮಾಧಾನ ತಂದಿದೆ. ಅದರೆ, 1ವರ್ಷಕ್ಕೆ ಮಿತಿಗೊಳಿಸುವ ಪ್ರಯತ್ನಗಳು ನಡೆದರೆ ಪರಿಣಾಮ ಕೆಟ್ಟದಾಗುತ್ತದೆ ಎಂದಿದ್ದಾರೆ.
ರಕ್ತಕ್ಕೆ ಅಂಟಿದ ಭಾಷೆ ಕಲಿಕೆಯನ್ನು 1 ವರ್ಷಕ್ಕೆ ಮಿತಿಗೊಳಿಸುವುದು ಅವೈಜ್ಞಾನಿಕ. ಈ ಬಗ್ಗೆ ಡಿಸಿಎಂ @drashwathcn ಸ್ಪಷ್ಟನೆ ನೀಡಿದ್ದಾರೆ. ಈಗಿನ ವ್ಯವಸ್ಥೆಯಂತೆ 2 ವರ್ಷದ ಕನ್ನಡ ಕಲಿಕೆಗೆ ತೊಂದರೆ ಇಲ್ಲ ಎಂದು ಹೇಳಿರುವುದು ಸ್ವಲ್ಪ ಸಮಾಧಾನ ತಂದಿದೆ. ಅದರೆ, 1ವರ್ಷಕ್ಕೆ ಮಿತಿಗೊಳಿಸುವ ಪ್ರಯತ್ನಗಳು ನಡೆದರೆ ಪರಿಣಾಮ ಕೆಟ್ಟದಾಗುತ್ತದೆ.
2/2— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 19, 2021