ದೆಹಲಿ: ಭಾರತದ ಇತಿಹಾಸದಲ್ಲಿ ಇಂದು ಅವಿಸ್ಮರಣೀಯ ದಿನ. ರಾಷ್ಟ್ರದ ಪ್ರಜಾಪ್ರಭುತ್ವದ ನೂತನ ದೇಗುಲ ‘ಸಂಸತ್ ಭವನ’ವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.
ಪೂಜಾ ವಿಧಿವಿಧಾನ ಮೂಲಕ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯಲಾಯಿತು. ಶೃಂಗೇರಿ ಮಠದ ಪುರೋಹಿತರು ಕೈಂಕರ್ಯ ನೆರವೇರಿಸಿದ ನಂತರ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭ ನೆರವೇರಿತು.
ಭಾರತೀಯರ ಸ್ವಾಭಿಮಾನದ ಪ್ರತೀಕ ನವ ಭಾರತದ ನೂತನ ಸಂಸತ್ ಭವನ !
ಪ್ರಧಾನಿ ಶ್ರೀ @narendramodi ಅವರು ಇಂದು ನವ್ಯ – ಭವ್ಯ ಸಂಸತ್ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. #MyParliamentMyPride pic.twitter.com/Qm8YgVvqdj
— BJP Karnataka (@BJP4Karnataka) May 28, 2023
ಈ ಸಂದರ್ಭದಲ್ಲಿ ಪೌರಾಣಿಕ ಮಹತ್ವವುಳ್ಳ ರಾಜದಂಡವಾದ ‘ಸೆಂಗೋಲ್’ ಅನ್ನು ತಮಿಳುನಾಡಿನ ವಿವಿಧ ಅಧೀನಂ ತಂಡದವರು ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು.























































