ಮುಂಬೈ: ಮುಂಗಾರು ಪೂರ್ವದ ಭಾರೀ ಮಳೆ ಮಹಾರಾಷ್ಟ್ರದ ಹಲವೆಡೆ ಅವಾಂತರ ಸೃಷ್ಟಿಸಿದೆ. ಮೂಂಬೈ ಸಮೀಪ ಬಿರುಗಾಳಿ ಹೊಡೆತಕ್ಕೆ ಕಬ್ಬಿಣದ ಬೃಹತ್ ಹೋರ್ಡಿಂಗ್ ಬಿದ್ದು ಸಾವು-ನೋವು ಸಂಭವಿಸಿದೆ.
ಘಾಟ್ಕೋಪರ್ ಪ್ರದೇಶದಲ್ಲಿ ಸೋಮವಾರ ಸಂಜೆ ಬೃಹತ್ ಹೋಲ್ಡಿಂಗ್ ಒಂದು ಸಮೀಪದ ಪೆಟ್ರೋಲ್ ಪಂಪ್ ಮೇಲೆ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
#WATCH | Maharashtra | 35 people reported injured after a hoarding fell at the Police Ground Petrol Pump, Eastern Express Highway, Pantnagar, Ghatkopar East. Search and rescue is in process: BMC
(Viral video confirmed by official) https://t.co/kRYGqM61UW pic.twitter.com/OgItizDMMN
— ANI (@ANI) May 13, 2024
. ದುರ್ಘಟನೆ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಜನರನ್ನು ರಕ್ಷಿಸಿದೆ. ಕುಸಿದು ಬಿದ್ದ ಜಾಹೀರಾತು ಫಲಕದ ಅಡಿಯಲ್ಲಿ ಅನೇಕರು ಸಿಲುಕಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸುದೀರ್ಘ ಹೊತ್ತು ನಡೆದಿದೆ.
#WATCH | A tall metal structure standing opposite a building collapses due to a strong storm in the Wadala area of Maharashtra
(Viral video, confirmed by officials) pic.twitter.com/OM20Bu4PYw
— ANI (@ANI) May 13, 2024
ಇದೇ ವೇಳೆ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಭಾರೀ ಮಳೆ ಸರಣಿ ಅವಘಡಗಳಿಗೆ ಕಾರಣವಾಗಿದೆ. ಇದೇ ವೇಳೆ, ಭಾರೀ ಮಳೆ ಕಾರಣದಿಂದಾಗಿ ಮುಂಬಯಿ ವಿಮಾನ ನಿಲ್ಧಾಣದಲ್ಲಿ 15 ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು. ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 66 ನಿಮಿಷಗಳ ಕಾಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.