ಬೆಂಗಳೂರು: ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕೇಸಿಗೂ ಜೆಡಿಎಸ್ ನಾಯಕರಿಗೂ ಸಂಬಂಧ ಇಲ್ಲ ಎಂದಿದ್ದಾರೆ.
ರಾಜ್ಯದ ಸಮಸ್ತ ಜನತೆ ಹಾಗೂ ಎಲ್ಲಾ ತಂದೆ ತಾಯಂದಿರು, ಸಹೋದರ ಸಹೋದರಿಯರಿಗೆ ನಾನು ವಿನಮ್ರತೆಯಿಂದ ಹೇಳ ಬಯಸುವುದು ಇಷ್ಟೇ…
•ಯಾರು ಕೂಡ ನನ್ನ ಬಗ್ಗೆಯಾಗಲಿ, ನನ್ನ ತಂದೆಯವರ ಬಗ್ಗೆಯಾಗಲಿ ಸಂಶಯಪಡುವುದು ಬೇಡ. ಈ ಪ್ರಕರಣದಲ್ಲಿ ಏನಾದರೂ ಸತ್ಯಾಸತ್ಯತೆ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಬಗ್ಗೆ ರಾಜ್ಯದ ಸಹೋದರಿಯರ ಪರವಾಗಿ ನಾನೇ… pic.twitter.com/FiBf0Rud8W— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 29, 2024
ರಾಜ್ಯದ ಸಮಸ್ತ ಜನತೆ ಹಾಗೂ ಎಲ್ಲಾ ತಂದೆ ತಾಯಂದಿರು, ಸಹೋದರ ಸಹೋದರಿಯರಿಗೆ ನಾನು ವಿನಮ್ರತೆಯಿಂದ ಹೇಳ ಬಯಸುವುದು ಇಷ್ಟೇ, ಯಾರು ಕೂಡ ನನ್ನ ಬಗ್ಗೆಯಾಗಲಿ, ನನ್ನ ತಂದೆಯವರ ಬಗ್ಗೆಯಾಗಲಿ ಸಂಶಯಪಡುವುದು ಬೇಡ. ಈ ಪ್ರಕರಣದಲ್ಲಿ ಏನಾದರೂ ಸತ್ಯಾಸತ್ಯತೆ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ಬಗ್ಗೆ ರಾಜ್ಯದ ಸಹೋದರಿಯರ ಪರವಾಗಿ ನಾನೇ ದನಿ ಎತ್ತುತ್ತೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.




















































