ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರೇಣುಕಾ ಶರ್ಮಾ ಇನ್ನಿಲ್ಲ. ಕವಿರತ್ನ ಕಾಳಿದಾಸ, ಅಂಜದ ಗಂಡು, ಕಿಂದರಿ ಜೋಗಿ, ಸಹಿತ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. 81 ವರ್ಷ ವಯಸ್ಸಿನ ರೇಣುಕಾ ಶರ್ಮಾ ಅವರು ಕೋವಿಡ್ ಸೋಂಕಿಗೊಳಗಾಗಿದ್ದರು. ಬೆಙಗಳೂರಿನ ಗಿರಿನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದ ನಿಧನರಾಗಿದ್ದಾರೆ ಎಂ್ಉ ಮೂಲಗಳು ತಿಳಿಸಿವೆ.
1981ರಲ್ಲಿ ಅನುಪಮ ಚಿತ್ರದ ಮೂಲಕ ಅವರು ನಿರ್ದೇಶನ ಕ್ಷೇತ್ರಕ್ಕೆ ಬಂದಿದ್ದರು. ‘ಶಹಬ್ಬಾಸ್ ವಿಕ್ರಮ್’, ‘ಸತ್ಕಾರ’ ಹಾಗೂ ‘ನಮ್ಮ ಊರ ದೇವತೆ’, ‘ಶಬರಿಮಲೆ ಶ್ರೀ ಅಯ್ಯಪ್ಪ’, ‘ಭರ್ಜರಿ ಗಂಡು’ ಹಾಗೂ ‘ಹಠಮಾರಿ ಹೆಣ್ಣು ಕಿಲಾಡಿ ಗಂಡು’, ‘ಕೊಲ್ಲೂರು ಶ್ರೀ ಮೂಕಾಂಬಿಕೆ’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ರೇಣುಕಾ ಶರ್ಮಾ ನಿರ್ದೇಶಿಸಿದ್ದಾರೆ.