ದೆಹಲಿ: ಜಾಗತಿಕ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಸರ್ವಶ್ರೇಷ್ಠರಾಗಿ ಗುರುತಾಗಿದ್ದಾರೆ. ವಿಶ್ವಮಾನ್ಯ ನಾಯಕರ ಪಟ್ಟಿಯಲ್ಲಿ ಸತತ ಎರಡನೇ ಬಾರಿಗೆ ಮೋದಿ ಅಗ್ರಸ್ಥಾನಕ್ಕೇರಿದ್ದಾರೆ.
ಅಮೆರಿಕದ ಪ್ರತಿಷ್ಠಿತ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯಲ್ಲಿ ಮೋದಿಯವರ ವರ್ಚಸ್ಸೇ ವಿಶ್ವದ ಪ್ರಮುಖ ನಾಯಕರ ಪೈಕಿ ಶ್ರೇಷ್ಠವಾದದ್ದು ಎಂದು ಗೊತ್ತಾಗಿದೆ. 13 ದೇಶಗಳ ಪ್ರಭಾವಿ ನಾಯಕರ ವರ್ಚಸ್ಸು, ನಡೆ, ಆಡಳಿತ ವೈಖರಿ ಆಧರಿಸಿ ‘ಮಾರ್ನಿಂಗ್ ಕನ್ಸಲ್ಟ್’ ಸಂಸ್ಥೆ ಈ ಸಮೀಕ್ಷೆಯನ್ನು ಕೈಗೊಂಡಿದೆ. ಈ ಪೈಕಿ ಸುಮಾರು ಶೇ.70 ಜನರು ಪ್ರಧಾನಿ ಮೋದಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ. ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಆರನೇ ಸ್ಥಾನದಲ್ಲಿದ್ದಾರೆ.
ಶ್ರೇಷ್ಠತೆ ಆಧರಿಸಿ ಸಿದ್ದಪಡಿಸಲಾದ ನಾಯಜರ ಜೇಷ್ಠತಾ ಪಟ್ಟಿ ಹೀಗಿದೆ.
- ನರೇಂದ್ರ ಮೋದಿ, (ಭಾರತ ಪ್ರಧಾನಿ)
- ಲೋಪೇಜ್ ಒಬ್ರೆಟರ್ (ಮೆಕ್ಸಿಕೋ ಅಧ್ಯಕ್ಷ)
- ಮರಿಯೊ ಡ್ರಾ (ಇಟಲಿ ಪ್ರಧಾನಿ)
- ಏಂಜೆಲೊ ಮಾರ್ಕೆಲ್ (ಜರ್ಮನಿ ಪ್ರಧಾನಿ)
- ಸ್ಕಾಟ್ ಮೊರಿಸನ್ (ಆಸ್ಟ್ರೇಲಿಯಾ ಪ್ರಧಾನಿ)
- ಜೊ ಬೈಡನ್ (ಅಮೆರಿಕ ಅಧ್ಯಕ್ಷ)
- ಜಸ್ಟಿನ್ ಟ್ರಾಡೆಯು (ಕೆನಡಾ ಪ್ರಧಾನಿ)
- ಫ್ಯೂಮಿಯೋ ಕಿಶಿದಾ (ಜಪಾನ್ ಪ್ರಧಾನಿ)
- ಮೂನ್ ಜೆ ಇನ್ (ದ.ಕೊರಿಯಾ ಅಧ್ಯಕ್ಷ)
- ಬೋರಿಸ್ ಜಾನ್ಸನ್ (ಯು.ಕೆ. ಪ್ರಧಾನಿ)
- ಪೆಡ್ರೊ ಸ್ಯಾಂಚೆಜ್ (ಸ್ಪೇನ್ ಪ್ರಧಾನಿ)
- ಇಮಾನ್ಯುಯೆಲ್ ಮಕ್ರನ್ (ಫ್ರಾನ್ಸ್ ಅಧ್ಯಕ್ಷ)
- ಜೈರ್ ಬೊಲ್ಸೊನಾರೋ (ಬ್ರೆಜಿಲ್ ಅಧ್ಯಕ್ಷ)