ದೆಹಲಿ: ಕೊರೋನಾ ಸೋಂಕು ನಿರೋಧಕ ಲಸಿಕೆ ಬಗ್ಗೆ ದೇಶದ ಜನರು ಆತಂಕ ಪಡಬೇಕಿಲ್ಲ. ಜೂನ್ 21ರಿಂದಲೇ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ಲಸಿಕೆಯ ವೇಗ ಇದೀಗ ಹೆಚ್ಚಿದೆ. ಹಲವಾರು ಕಂಪನಿಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿದ್ದು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯ ಸರ್ಕಾರಗಳಿಗೆ ಪೂರೈಕೆ ಮಾಡಲಿದೆ. ಈ ಮೂಲಕ ಎಲ್ಲರಿಗೂ ಉಚಿತವಾಗಿಯೇ ಲಸಿಕೆ ಸಿಗಲಿದೆ ಎಂದು ಘೋಷಿಸಿದರು.
ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ಪೂರೈಕೆಯಾಗಲಿದೆ. ಈ ಖಾಸಗಿ ಆಸ್ಪತ್ರೆಗಳಲ್ಲೂ 150 ರೂಪಾಯಿ ಸೇವಾ ಶುಲ್ಕ ಪಾವತಿಸಿ ಲಸಿಕೆ ಪಡೆಯಬಹುದು ಎಂದು ಪ್ರಧಾನಿ ಹೇಳಿದರು.
ಕೊರೋನಾ ಸಂಕಟ ಕಾಲದಲ್ಲಿ ಯಾರೊಬ್ಬರೂ ಸಾವಿನಿಂದಾಗಿ ಸಾಯಬಾರದು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ದೇಶದಲ್ಲಿರುವ ಬಡಜನರಿಗೆ ನವೆಂಬರ್ವರೆಗೂ ಉಚಿತವಾಗಿ ಆಹಾರ ಧಾನ್ಯ ನೀಡಲಾಗುವುದು. ಮುಂಬರುವ ದೀಪಾವಳಿವರೆಗೂ ಆಹಾರ ಧಾನ್ಯ ನೀಡಲಾಗುತ್ತದೆ ಎಂದು ಮೋದಿ ಪ್ರಕಟಿಸಿದರು.
ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ:
- ಕೊರೋನಾ ಪರಿಸ್ಥಿತಿ ದೇಶಕ್ಕೇ ಸವಾಲು.. ಇದನ್ಬು ನಿಭಾಯಿಸುವಲ್ಲಿ ಭಾರತ ಯಶಸ್ವಿಯಾಗುತ್ತಿದೆ.
- ದೇಶದ ಹಲವು ರಾಷ್ಟ್ರಗಳಲ್ಲಿ ಲಸಿಕೆ ನಿಧಾನಗತಿಯಲ್ಲಿದೆ. ಆದರೆ ಭಾರತ ಹಿಂದೆ ಉಳಿದಿಲ್ಲ.
- ಭಾರತದಲ್ಲೀಗ ಲಸಿಕೆ ವೇಗ ಹೆಚ್ಚುತ್ತಿದೆ.
- ಕಡಿಮೆ ಸಮಯದಲ್ಲಿ ಹೆಚ್ಚಿನ ವ್ಯಾಕ್ಸಿನ್ ಉತ್ಪಾದನೆಯಾಗುತ್ತಿದೆ.
- ಇನ್ನೂ ಮೂರು ಕಂಪೆನಿಗಳು ಪ್ರಯೋಗದ ಹಂತದಲ್ಲಿವೆ.
- ವಾರಿಯರ್ಸ್ ವ್ಯಾಕ್ಸಿನ್ ಪಡೆದು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ.
- ಇನ್ನು ಮುಂದೆ ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಲಸಿಕೆ ಪೂರೈಸಲಿದೆ.
- ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ ಪೂರೈಕೆ ಮಾಡಲಿದೆ.
- ಮುಂದಿನ 2 ವಾರಗಳ ಬಳಿಕ ಕೇಂದ್ರವೇ ಲಸಿಕೆ ಪೂರೈಕೆ ಮಾಡಲಿದೆ.
- ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ನೀಡಲಿದೆ.
- ದೇಶದ ಎಲ್ಲಾ ಜನರಿಗೆ ಲಸಿಗೆ ಸಿಗಲಿದೆ.
- ಖಾಸಗಿ ಆಸ್ಪತ್ರೆಗಳೂ ಶೇ.25ರಷ್ಟು ಲಸಿಕೆ ಪಡೆಯಲು ಅವಕಾಶವಿದೆ.
- ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಕೇವಲ 150 ರೂಪಾಯಿ ನಿಗದಿ.
- ಇದರ ಜೊತೆಗೆ ಕಡು ಬಡವರಿಗೆ ಪಡಿತರ ವಿತರಣೆಗೆ ಕ್ರಮ
- ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡಲಾಗುವುದು.
- ನವೆಂಬರ್ ತಿಂಗಳವರೆಗೂ ಆಹಾರ ಧಾನ್ಯ ನೀಡಲಾಗುವುದು.
- ಯಾವೊಬ್ಬ ನಾಗರಿಕನೂ ಹಸಿವಿನಿಂದ ಸಾಯಬಾರದು.
- ದೀಪಾವಳಿವರೆಗೆ ಉಚಿತ ಆಹಾರ ಧಾನ್ಯ ನೀಡಲಾಗುವುದು.