ಬೆಂಗಳೂರು: ಕೋವಿಡ್ 19 ನಿರ್ವಹಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಅತ್ಯುತ್ತಮ ಸಾಧನೆ ಮಾಡಿದವರು ಎಂಬ ಸ್ಥಾನ ಪಡೆದಿದ್ದಾರೆ. ಅಮೆರಿಕದ ಸಂಶೋಧನಾ ಸಂಸ್ಥೆ “ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆಯಲ್ಲಿ ಮೋದಿಜಿ ಅವರು ವಿಶ್ವಮಾನ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ಮೋದಿಗೆ ಶೇ 74 ಜನಮತ ಲಭಿಸಿದ್ದರೆ, ನಂತರದ ಸ್ಥಾನ ಪಡೆದ ಬ್ರೆಜಿಲ್ ಪ್ರಧಾನಿ ಜೈರ್ ಬೊಲ್ಸೊನಾರೊ ಅವರು ಶೇ 46 ಮತ ಪಡೆದಿದ್ದಾರೆ. ಅಮೆರಿಕದ ಹಿಂದಿನ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಶೇ 41, ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಶೇ 39 ಜನಮತ ಗಳಿಸಿದ್ದಾರೆ.
ಇದು ನಮ್ಮ ಪ್ರಧಾನಿಯವರ ಅಪಾರ ಜನಪ್ರಿಯತೆ ಮತ್ತು ಕರ್ತವ್ಯಪರತೆಗೆ ಸಂದ ಮನ್ನಣೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಟ್ಸರ್‌ಲ್ಯಾಂಡ್‌ನ ಗ್ಯಾಲಪ್ ಇಂಟರ್‌ನ್ಯಾಷನಲ್ ಅಸೋಸಿಯೇಷನ್ ಕೊರೊನಾ ಸಂಬಂಧ ಕಳೆದ ಏಪ್ರಿಲ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲೂ ನಮ್ಮ ಪ್ರಧಾನಿಗಳ ಜನಪ್ರಿಯತೆ ವ್ಯಕ್ತವಾಗಿತ್ತು. 91 ಭಾರತೀಯರು ಪ್ರಧಾನಿಯವರ ಅದ್ಭುತ ಕಾರ್ಯವೈಖರಿ ಕುರಿತು ಮೆಚ್ಚುಗೆ ಸೂಚಿಸಿದ್ದರು ಎಂದು ನೆನಪಿಸಿದರು.
ಸಿ ವೋಟರ್ 2020ರ ಸೆಪ್ಟೆಂಬರ್ 12ರಂದು ನಡೆಸಿದ ಸಮೀಕ್ಷೆಯಲ್ಲಿ ಶೇ 75.8 ಜನರು ಮೋದಿಯವರ ಕಾರ್ಯತಂತ್ರಕ್ಕೆ ಮೆಚ್ಚುಗೆ ಸೂಚಿಸಿ ಅವರನ್ನು ಬೆಂಬಲಿಸಿದ್ದರು.
2019ರ ಮೇ 1ರಂದು ನಡೆದ “ಗ್ಯಾಲಪ್” ಸರ್ವೇಯಲ್ಲೂ 2014ರ ಬಳಿಕ ಶ್ರೀ ಮೋದಿ ಅವರ ಸರಕಾರವು ಕೈಗೊಂಡ ಕ್ರಮಗಳಿಂದ ಭಾರತವು ಸುರಕ್ಷಿತ ದೇಶವಾಗಿ ಹೊರಹೊಮ್ಮಿದೆ ಎಂಬ ಮಾತನ್ನು ಶೇ 70 ಜನರು ಹೇಳಿದ್ದರು. ರಾತ್ರಿ ವೇಳೆ ನಗರದಲ್ಲಿ ಓಡಾಡುವಷ್ಟು ದೇಶವು ಸುರಕ್ಷಿತವಾಗಿದೆ ಎಂಬ ಧನಾತ್ಮಕ ಮಾತನ್ನು ಆಡಿರುವುದು ಗಮನಾರ್ಹ ಎಂದರು.
ಇದನ್ನೂ ಓದಿ.. ಬಿಎಸ್‌ವೈ ಬದಲಾವಣೆ ಇಲ್ಲ ಎಂದ ಹೈಕಮಾಂಡ್.. ಆದರೆ ಅಮಿತ್ ಶಾ ನಡೆ ಇನ್ನೂ ನಿಗೂಢ..
ಅಮೆರಿಕದ ಅಧ್ಯಕ್ಷರು ನೀಡುವ ಮಹತ್ವದ ಪ್ರಶಸ್ತಿ ಲೀಜನ್ ಆಫ್ ಮೆರಿಟ್ , ಅಮೆರಿಕದ ಗೇಟ್ಸ್ ಪ್ರತಿಷ್ಠಾನವು ಕೊಡಮಾಡುವ ಗ್ಲೋಬರ್ ಗೋಲ್‌ಕೀಪರ್ ಪ್ರಶಸ್ತಿ, ಬಹ್ರೇನ್‌ನ ರಾಜ ಹಾಮದ್ ಬಿನ್ ಇಸ್ಸಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ಬಹ್ರೇನ್‌ನ ಶ್ರೇಷ್ಠ ಪ್ರಶಸ್ತಿ ದಿ ಕಿಂಗ್ ಹಾಮದ್ ಆರ್ಡರ್ ಆಫ್ ದಿ ರಿನೈಸೆನ್ಸ್ ಅವಾರ್ಡ್, ಮಾಲ್ದಿವ್ಸ್ ನಲ್ಲಿ “ನಿಶಾನ್ ಇಜುದ್ದೀನ್” ಪುರಸ್ಕಾರ, ರಷ್ಯಾದ ಅತ್ಯುಚ್ಛ ಪ್ರಶಸ್ತಿ ಎನಿಸಿದ ಆರ್ಡರ್ ಆಫ್ ಸೈಂಟ್ ಆಂ ಆಂಡ್ರ್ಯೂಸ್ ದಿ ಅಪೋಸ್ಟಲ್ ಅವಾರ್ಡ್, ಅರಬ್ ಒಕ್ಕೂಟಗಳ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ಜಯೀದ್ ಅವಾರ್ಡ್, ಸಿಯೋಲ್ ಪೀಸ್ ಪ್ರೆöÊಜ್ ಆಪ್ 2018, 2019ರಲ್ಲಿ ಅಮೆರಿಕದಿಂದ ಫಿಲಿಪ್ ಕೋಲ್ಟೆರ್ ಅವಾರ್ಡ್, 2018ರಲ್ಲಿ ವಿಶ್ವಸಂಸ್ಥೆಯಿAದ ಯುಎನ್‌ಇಪಿ ಚಾಂಪಿಯನ್ಸ್ ಆಫ್ ಅರ್ತ್, ಪ್ಯಾಲೆಸ್ಟೆöÊನ್ ದೇಶದಿಂದ 2018ರಲ್ಲಿ ಗ್ರಾಂಡ್ ಕಾಲರ್ ಅವಾರ್ಡ್, 2016ರಲ್ಲಿ ಅಫಘಾನಿಸ್ತಾನ ದೇಶದಿಂದ ಅಮಿರ್ ಅಮಾನುಲ್ಲಾ ಖಾನ್ ಅವಾರ್ಡ್, 2016ರಲ್ಲಿ ಸೌದಿ ಅರೇಬಿಯಾದಿಂದ ಕಿಂಗ್ ಅಬ್ದುಲ್ ಅಜೀಜ್ (ಸ್ಪೆಷಲ್ ಕ್ಲಾಸ್) ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ ಎಂದು ತಿಳಿಸಿದರು.