ಮುಂಬೈ: ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತ ಸುಂದರಿ ಸಿನಿ ಶೆಟ್ಟಿ ಅವರು ಸ್ವಲ್ಪದರಲ್ಲೇ ಕಿರೀಟ ವಂಚಿತರಾದರು. ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಪ್ರತಿಷ್ಠಿತ ಟಾಪ್ 8 ಸ್ಥಾನ ಪಡೆದರು.
ಚಲನಚಿತ್ರ ನಿರ್ಮಾಪಕ ಮತ್ತು ಸೆಲೆಬ್ರಿಟಿ ಟಾಕ್ ಶೋ ನಿರೂಪಕ ಕರಣ್ ಜೋಹರ್ ಅವರು ಮುಂಬೈನಲ್ಲಿ ಆಯೋಜಿಸಿದ್ದ ಬೆರಗುಗೊಳಿಸುವ ಸಮಾರಂಭದಲ್ಲಿ, ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 71 ನೇ ವಿಶ್ವ ಸುಂದರಿ ಕಿರೀಟವನ್ನುತನ್ನದಾಗಿಸಿದರು. ಸುಮಾರು 28 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೆದಿದ್ದು ಈ ಸನ್ನಿವೇಶ ಜಗತ್ತಿನ ಗಮನಸೆಳೆಯಿತು.
ಲೆಬನಾನ್ನ ಯಾಸ್ಮಿನಾ ಜೈಟೌನ್, ಟ್ರಿನಿಡಾಡ್ ಮತ್ತು ಟೊಬಾಗೋದ ಅಚೆ ಅಬ್ರಹಾಮ್ಸ್ ಮತ್ತು ಬೋಟ್ಸ್ವಾನಾದ ಲೆಸೆಗೊ ಚೊಂಬೋ ಅವರಂತಹ ಪ್ರಬಲ ಸ್ಪರ್ಧಿಗಳ ನಡುವೆ ಕ್ರಿಸ್ಟಿನಾ ಅವರು ಗೆಲುವಿನ ನಗೆ ಬೀರಿದರು. ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಪ್ರತಿಷ್ಠಿತ ಟಾಪ್ 8 ರಲ್ಲಿ ಸ್ಥಾನ ಪಡೆದರು.
Miss World India – Sini Shetty Question and Answer round
Miss World 2024 Final #MissWorld #71MW #MissWorld71 #BWAP #BeautywithaPurpose #India #incredibleindia pic.twitter.com/ykE7oHNYIN
— MissMiss (@MissMiss1546642) March 9, 2024
ಮಹಿಳಾ ಸಬಲೀಕರಣದಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರದ ಕುರಿತ ಸ್ಪರ್ಧಾತ್ಮಕ ಪ್ರಶ್ನೆಗೆ ಸಿನಿ ಶೆಟ್ಟಿ ನೀಡಿದ ಉತ್ತರ ತೀರ್ಪುಗಾರರನ್ನು ಮೆಚ್ಚಿಸುವಲ್ಲಿ ವಿಫಲವಾತು. ಇದು ಅವರ ಎಲಿಮಿನೇಷನ್ಗೆ ಕಾರಣವಾಯಿತು. ವಿವಿಧ ಡೊಮೇನ್ಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಪ್ರಗತಿಯನ್ನು ಹೆಚ್ಚಿಸಲು ಸಾಮಾಜಿಕ ಮಾಧ್ಯಮದ ಸಾಮರ್ಥ್ಯವನ್ನು ಹೈಲೈಟ್ ಮಾಡಿದರೂ, ಅವರ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಸಾಕಾಗಲಿಲ್ಲ. ಅದಾಗಲೇ ಅವರಿದ್ದ ಟಾಪ್ 8 ರಲ್ಲಿ ಸ್ಥಾನಕ್ಕೆ ಸಿನಿ ಶೆಟ್ಟಿ ತೃಪ್ತಿಪಟ್ಟುಕೊಳ್ಳಬೇಕಾಯಿತು.
Miss India World 2024! Sini Shetty repped India in the Miss World 2024 pageant held in Mumbai tonight – she got into the top 8 but was beaten by Miss Lebanon in the race to the Top 4. Chalo koi nai, next time👊#MissWorld2024#MissWorld.#bollywood #SiniShetty pic.twitter.com/PcLC4PSTNL
— Bollywood Today (@BollywoodToday_) March 10, 2024