ಬೆಂಗಳೂರು -ಕಬ್ಬಿಣದ ಆದಿರು ಗಣಿ ಕಂಪನಿಗಳಿಂದ ದಂಡದ ರೂಪದಲ್ಲಿ ಸುಪ್ರೀಂಕೋರ್ಟ್ ನಿದೇರ್ಶನದಂತೆ ಕಳೆದ ಆರು ವರ್ಷಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ನಿಧಿಯನ್ನು ಪಡೆಯಲು ಕಾನೂನಿನ ನೆರವು ನೀಡಬೇಕೆಂದು ಸಚಿವ ಮುರುಗೇಶ್ ನಿರಾಣಿ ಅವರು, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯನ್ನು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರನ್ನು ಖುದ್ದು ಭೇಟಿ ಮಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ನಿರಾಣಿ ಅವರು ಮಾತುಕತೆ ನಡೆಸಿ,ಸಭೆಯಲ್ಲಿ ಸಂಗ್ರಹಿಸಿದ ನಿಧಿಯ ವಿಷಯವನ್ನು ಪ್ರಸ್ತಾಪ ಮಾಡಿದರು.
ಕಬ್ಬಿಣದ ಅದಿರು ಗಣಿಗಳಿಂದ ದಂಡ ಮತ್ತು ಲೆವಿ ರೂಪದಲ್ಲಿ ಸಂಗ್ರಹಿಸಿದ ಸುಮಾರು, 18,000 ಕೋಟಿಗಳನ್ನು ಕಳೆದ ಆರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೂಲಕ ಸಂಗ್ರಹಿಸಲಾಗಿದೆ. ಸಂಗ್ರಹವಾದ ನಿಧಿಯನ್ನು
ಪಡೆಯಲು ಕಾನೂನು ನೆರವು ನೀಡುವಂತೆ ಕೋರಿದರು.
ಇದೇ ವೇಳೆ ನಿರಾಣಿ ಅವರು,ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶಗಳಾದ ಬಳ್ಳಾರಿ , ಚಿತ್ರದುರ್ಗ ಮತ್ತು ತುಮಕೂರುಗಳಿಗೆ ಪುನರ್ವಸತಿ ಕಲ್ಪಿಸಲು – ಸಿಇಪಿಎಂಐಜಡ್ ಅನುಷ್ಠಾನ ಮಾಡಲು ಅವಕಾಶ ನೀಡಬೇಕೆಂದು ಆಗ್ರಹ ಮಾಡಿದರು.
ಇದು ದೀರ್ಘಾವಧಿಯ ಬೇಡಿಕೆಯಾಗಿದ್ದು, ಆದಷ್ಟು ಬೇಗ ಸೂಕ್ತವಾದ ನಿರ್ಧಾರ ತೆಗೆದುಕೊಂಡರೆ, ಹೆಚ್ಚಿನ ಅನುಕೂಲವಾಗಲಿದೆ ಜೋಶಿ ಅವರಿಗೆ ನಿರಾಣಿಯವರು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂಧಿಸಿದ ಪ್ರಹ್ಲಾದ್ ಜೋಶಿ,ಈ ವಿಷಯದ ಕುರಿತು ಹೆಚ್ಚಿನ ಚರ್ಚೆಗಾಗಿ ದೆಹಲಿಗೆ ಭೇಟಿ ಬರುವಂತೆ ನಿರಾಣಿಯವರಿಗೆ ಸಲಹೆ ಮಾಡಿದರು.


























































