ದೆಹಲಿ: ಖಾಸಗಿತನದ ಬಗ್ಗೆ ಗೊಂದಲ ಮೂಡಿಸಿರುವ ವಾಟ್ಸಪ್ ಬಗ್ಗೆ ಇದೀಗ ಬಳಕೆದಾರರಲ್ಲಿ ಬಗೆ ಬಗೆಯ ಅನುಮಾನಗಳು ಹುಟ್ಟಿಕೊಂಡಿವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ನಾವೆಷ್ಟು ಸೇಫ್ ಎಂಬ ಬಾವನೆ ಜನರಲ್ಲಿ ಮೂಡಿವೆ.
ತಮ್ಮ ಮೊಬೈಲ್‌ನಲ್ಲಿರುವ ದಾಖಲೆಗಳು ಸೋರಿಕೆಯಾಗಬಹುದೇ? ತಮ್ಮ ಖಾಸಗಿತನಕ್ಕೆ ಮಾರಕವಾಗಿದೆಯೇ ಎಂಬಿತ್ಯಾದಿ ಅನುಮಾನಗಳು ಹುಟ್ಟಿಕೊಂಡಿದ್ದೇ ತಡ ಮಾಧ್ಯಮಗಳು ಕೂಡಾ ಈ ವಿಚಾರದತ್ತ ಗಮನ ಕೇಂದ್ರೀಕರಿಸಿವೆ.
ಅದೇ ಹೊತ್ತಿಗೆ ವಾಟ್ಸಪ್ ವಿರುದ್ದದ ಆರೋಪವೊಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು ಈ ಬೆಳವಣಿಗೆ ಈಗ ಇಡೀ ದೇಶದ ಗಮನ ಸೆಳೆದಿದೆ. ವಿಚಾರಣೆ ನಡೆಸಿದ ಹೈಕೋರ್ಟ್, ಹೊಸ ನೀತಿಯನ್ನು ಒಪ್ಪಿಕೊಳ್ಳದ ಪಕ್ಷದಲ್ಲಿ ವಾಟ್ಸಪ್‌ಗೆ ಸೇರುವುದು ಬೇಡ ಎಂದು ಹೇಳಿದೆ.
ವಾಟ್ಸಪ್ ಡೇಟಾ ಅಸುರಕ್ಷತೆ ಸಂಬಂಧ ವಕೀಲರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ, ವಾಟ್ಸಪ್ ಒಂದು ಖಾಸಗಿ ಆ್ಯಪ್. ಹಾಗಾಗಿ ಅದರ ಪಾಲಿಸಿಗಳನ್ನು ಒಪ್ಪುವುದು- ಬಿಡುವುದು ಜನರ ವಿಚಾರಣೆಗೆ ಬಿಟ್ಟದ್ದು. ಅ ಕಂಪೆನಿಯ ಹೊಸ ನೀತಿಯನ್ನು ನೀವು ಒಪ್ಪಿ ಕೊಳ್ಳದೆ ಇದ್ದರೆ, ಅದರಲ್ಲಿ ಖಾತೆ ಹೊಂದುವ ಅಗತ್ಯವಿಲ್ಲ’ ಎಂದು ಹೇಳಿದೆ.
ವಾಟ್ಸಪ್ ಸಹಿತ ಹಲವು ಆ್ಯಪ್‌ಗಳು ಸುರಕ್ಷಿತವಲ್ಲ ಎಂಬ ಚರ್ಚೆ ನಡೆದಿದ್ದು, ಈ ವಿಚಾರದಲ್ಲಿ ಹೈಕೋರ್ಟ್ ವೆಳವಣಿಗೆಗಳನ್ನೂ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಈ ನಡುವೆ, ಮೆಸೆಂಜರ್ ಆ್ಯಪ್‌ಗಳ ಬದಲಾವಣೆ ಪರ್ವ ಮುಂದುವರಿದಿದೆ. ವಾಟ್ಸಪ್‌ಗೆ ಪಯ್ಯಾಯವೆನಿಸಿರುವ ಟೆಲಿಗ್ರಾಂ ಹಾಗೂ ಸಿಗ್ನಲ್ ಆ್ಯಪ್ ಜನರ ಚಿತ್ತ ಸೆಳೆದಿದೆ. ಭರ್ಜರಿ ಪೈಪೋಟಿ ಎಂಬಂತೆ ಈ ಆ್ಯಪ್‌ಗಳ ಪ್ರಚಾರವೂ ಸಾಗಿದೆ. ಆದರೆ ಯಾವ ಆ್ಯಪ್ ಬಗ್ಗೆಯೂ ಆರೋಪ ದೃಢಪಡದ ಕಾರಣ ಜನರು ಯಾವ ಆ್ಯಪ್ ಸುರಕ್ಷಿತ ಎಂಬ ಲೆಕ್ಕಾಚಾರದಲ್ಲಿದ್ದಾರೆ.