ಚಾಮರಾಜನಗರ : ಮನೆ ಬಾಗಿಲಲ್ಲಿಯೇ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ ಔಷಧ ವಿತರಿಸುವ ಗೃಹ ಆರೋಗ್ಯ ಯೋಜನೆಗೆ ಶಾಸಕ ಎಂ ಆರ್ ಮಂಜುನಾಥ್ ಚಾಲನೆ ನೀಡಿದ್ದಾರೆ.
ಹನೂರು ಪಟ್ಟಣದ ಶಾಸಕರ ನಿವಾಸದಲ್ಲಿ ಸ್ವತಃ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಮನೆ ಮನೆಗೆ ಬಂದಾಗ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಮಸ್ಯೆಗಳಿದ್ದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಳ್ಳಬೇಕು, ಪ್ರತಿಯೊಬ್ಬ ನಾಗರಿಕರು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಟಿಎಚ್ಒ ಡಾ ಪ್ರಕಾಶ್ ಮಾತನಾಡಿ ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಸಮಸ್ಯೆ ಇರುವ ಜನರನ್ನು ಗುರುತಿಸಿ ತಜ್ಞ ವೈದ್ಯರಲ್ಲಿ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಜಾಗೃತಿ ಮೂಡಿಸಲಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ, ಡಯಾಬಿಟಿಕ್ ಫುಟ್, ಡಯಾಬಿಟಿಕ್ ರೆಟಿನೋಪತಿ, ಬಾಯಿ ಮತ್ತು ಸ್ತನ, ಗರ್ಭಕಂಠದ ಕ್ಯಾನ್ಸರ್, ದೀರ್ಘಕಾಲದ ಮೂತ್ರಪಿಂಡ ಖಾಯಿಲೆ, ಲಿವರ್ ತೊಂದರೆ, ರಕ್ತ ಹೀನತೆ, ಮಾನಸಿಕ ಆರೋಗ್ಯ, ಧೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಸ್ಲೀಪ್ ವೆಪ್ನಿಯ, ನರರೋಗದಂತಹ ಒಟ್ಟು 14 ಸಾಂಕ್ರಾಮಿಕ ರೋಗಗಳಿಗೆ ತಪಾಸಣೆ ನಡೆಸಿ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈ ವೇಳೆ ಡಾ. ಉಲ್ಲಾಸ್, ಸಿಎಚ್ಒಗಳಾದ ಸಂತೋಷ್ ಮಂಜುನಾಥ್, ಎಚ್. ಐ.ಒ, ನಿಂಬೇಶ್ ಮೊದಲಾದವರು ಉಪಸ್ತಿತರಿದ್ದರು.