ಬೆಂಗಳೂರು: ಅಲೈಯನ್ಸ್ ಪಿಯು ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನವನ್ನು ಗೌರವದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂವಿಧಾನಿಕ ಮೌಲ್ಯಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವಗಳ ಬಗ್ಗೆ ಆಳವಾದ ಅರಿವು ಮೂಡಿಸುವ ಜೊತೆಗೆ, ಅವರ ಹಕ್ಕು– ಕರ್ತವ್ಯಗಳ ಕುರಿತು ಜಾಗೃತಿ ವೃದ್ಧಿಸುವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ದೃಢ ನಿಷ್ಠೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಂವಿಧಾನ ದಿನದ ವೈತಿಹಾಸಿಕ ಹಿನ್ನೆಲೆ ಹಾಗೂ ಇಂದಿನ ಕಾಲಘಟ್ಟದಲ್ಲಿ ಅದರ ಮಹತ್ವದ ಕುರಿತು ಆಲೋಚನಾತ್ಮಕ ಪ್ರಸ್ತುತಿ ಗಮನಸೆಳೆಯಿತು.

ಅಲೈಯನ್ಸ್ ಯೂನಿವರ್ಸಿಟಿ ಪ್ರಾಧ್ಯಾಪಕರಾದ ಡಾ. ಸುಮಂತ್ ಕುಮಾರ್, ಡಾ. ಶೋವ್ಕತ್ ಅಹ್ಮದ್ ವಾಣಿ ಮಾತನಾಡಿ ಸಂವಿಧಾನ ಮೌಲ್ಯಗಳ ಮಹತ್ವ, ನಾಗರಿಕರ ಜವಾಬ್ದಾರಿಗಳು, ಮತ್ತು ಪ್ರಜಾಪ್ರಭುತ್ವದ ಸಂಸ್ಥೆಗಳ ರಕ್ಷಣೆಯಲ್ಲಿ ಯುವಜನರ ಪಾತ್ರದ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ರೂಪು–ರೇಷೆಗಳು ಹಾಗೂ ಅದರ ಪರಿವರ್ತನಾ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಅರಿವು ಕಲ್ಪಿಸಲು, ಥೀಮ್ಯಾಟಿಕ್ ವಿಡಿಯೊ ಪ್ರದರ್ಶಿಸಲಾಯಿತು. ನಂತರ ಸಂವಿಧಾನದ ಪ್ರಸ್ತಾವನಾ ವಾಕ್ಯ (Preamble) ಮತ್ತು ‘ಪ್ರಸ್ತಾವನಾ ಶಪಥ’ವನ್ನು ಸಮೂಹವಾಗಿ ಓದಿ, ಅದರ ಮೌಲ್ಯಗಳನ್ನು ಉಳಿಸಿ ಬೆಳೆಸುವುದರಲ್ಲಿ ತಮ್ಮ ಬದ್ಧತೆಯನ್ನು ಎಲ್ಲರೂ ಪುನರುಚ್ಚರಿಸಿದರು.
ನಾಗರಿಕ ಜಾಗೃತಿ ಮತ್ತು ಅನುಭವಾತ್ಮಕ ಅಧ್ಯಯನವನ್ನು ಉತ್ತೇಜಿಸಲು ಕೃತಕ ಚುನಾವಣಾ ಪ್ರಕ್ರಿಯೆ (Mock Election) ಆಯೋಜಿಸಲಾಯಿತು. ಇದರಿಂದ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯ ಅನುಭವವನ್ನು ನೇರವಾಗಿ ಅರಿತುಕೊಂಡರು. ಜೊತೆಗೆ, ವಿದ್ಯಾರ್ಥಿಗಳು ವೋಟ್ ಬ್ಯಾಂಕ್ ಎಂಬ ಪರಿಕಲ್ಪನೆಯ ಕುರಿತು ಜಾಗೃತಿ ವಾಚನ ನೀಡಿದ್ದು, ಚುನಾವಣಾ ವ್ಯವಸ್ಥೆಯ ಚಲನಶೀಲತೆ ಮತ್ತು ನೈತಿಕ ಮತದಾನದ ಅಗತ್ಯತೆಯನ್ನು ಸಹಪಾಠಿಗಳಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿದರು.





















































