ಮಂಗಳೂರು: ಬಿಜೆಪಿ ಭದ್ರಕೋಟೆಯನ್ನು ಛಿದ್ರ ಮಾಡುವ ಹುಮ್ನಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮಂಗಳೂರಿನಲ್ಲಿ ಹಿನ್ನಡೆ ಉಂಟಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಮಂಗಳೂರು ರಾಜಕಾರಣಕ್ಕೆ ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡರು ಎಂಟ್ರಿ ಕೊಟ್ಟಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಬಿರುಗಾಳಿ ಎದ್ದಿದ್ದು ಬಂಡಾಯ ನಾಯಕ ಮೊಯ್ದಿನ್ ಬಾವಾ ಅವರನ್ನು ದೇವೇಗೌಡರು ಸೆಳೆದಿದ್ದಾರೆ. ಮೊಹಿದೀನ್ ಬಾವಾ ಅವರಿಗೆ ತರಾತುರಿಯಲ್ಲೇ ಬಿ-ಪಾರಂ ನೀಡಿರುವ ದೇವೇಗೌಡರು, ನಾಮಪತ್ರ ಸಲ್ಲಿಸುವಂತೆ ಆಶೀರ್ವದಿಸಿದ್ದಾರೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆ್ ಬಯಸಿ ಮಾಜಿ ಶಾಸಕ ಮೊಹಿದೀನ್ ಬಾವಾ ಅವರು ಭಾರೀ ಲಾಭಿ ನಡೆಸಿದ್ದಾರೆ. ಆದರೆ ಉದ್ಯಮಿ ಇನಾಯತ್ ಆಲಿ ಅವರ ಬಗ್ಗೆ ಹೈಕಮಾಂಡ್ ಒಲವು ತೋಡಿದ್ದರಿಂದ ಮೊಹಿದೀನ್ ಬಾವಾ ಮುನಿಸಿಕೊಂಡಿದ್ದರು. ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡಿ ದ್ದ ಮೊಯ್ದಿನ್ ಬಾವಾ ಅವರಿಗೆ ಕೊನೆಗೂ ಕೈ ಟಿಕೆಟ್ ಸಿಕ್ಕಿಲ್ಲ.
ಈ ನಡುವೆ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿರುವ ಮೊಹಿದೀನ್ ಬಾವ ತಾವು ಜೆಢಿಎಸ್‌ನಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಹಮತ ವ್ಯಕ್ತಪಡಿಸಿರುವ ದೇವೇಗೌಡರು ಅಸ್ತು ಎಂದಿದ್ದಾರೆ. ಜೆಡಿಎಸ್ ಪಕ್ಷದಿಂದ ಬಿ ಫಾರಂ ಪಡೆದಿರುವ ಮೊಹಿದೀನ್ ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.