ಮಂಗಳೂರು: ಬಂದರುನಗರಿ ಮಂಗಳೂರು ಇಂದು ಎದೆ ಝಲ್ಲೆನಿಸುವ ಘಟನೆಗೆ ಸಾಕ್ಷಿಯಾಗಿದೆ. ಮಂಗಳೂರಿನ ವಸತಿ ಗೃಹವೊಂದರಲ್ಲಿ ನಾಲ್ವರು ಸಾವಿಗೆ ಶರಣಾಗಿದ್ದಾರೆ.
ಮಂಗಳೂರಿನ ಹೃದಯಭಾಗದಂತಿರುವ ಕೆ.ಎಸ್.ರಾವ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ತಂಗಿದ್ದ ನಾಲ್ವರ ಶವ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ.
ಪತಿ, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದ, ಇವರೆಲ್ಲರೂ ಮೈಸೂರಿನ ವಿಜಯನಗರದ ನಿವಾಸಿಗಳೆನ್ನಲಾಗಿದೆ. ಮೃತರನ್ನು 46 ವರ್ಷದ ದೇವೆಂದ್ರ ಅವರು ಪತ್ನಿ ಮತ್ತು ಸುಮಾರು 9 ವರ್ಷದ ಅವಳಿ ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ.