ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದರವರು ಸಂಪೂರ್ಣ ಗುಣಮುಖರಾಗಿದ್ದು ಸಾರ್ವಜನಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಶಕ್ತರಾಗಿದ್ದಾರೆ. ಅವರು ಇಂದು ಮಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಧಾರ್ಮಿಕ ವಲಯದಲ್ಲಿ ಮತ್ತೆ ಲವಲವಿಕೆಯ ವಾತಾವರಣ ಕಂಡುಬಂದಿದೆ.
ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅವರು ಸುಮಾರು ನಾಲ್ಕು ತಿಂಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಎ.ಜೆ. ಆಸ್ಪತ್ರೆಯಲ್ಲಿ ಸುಮಾರು ಒಂದುವರೆ ತಿಂಗಳ ಕಾಲ ಚಿಕಿತ್ಸೆಗೆ ದಾಖಲಾಗಿದ್ದತು. ಸುದೀರ್ಘ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ಅಲ್ಹಮ್ದುಲಿಲ್ಲಾಹ್ ಅಲ್ಲಾಹನ ಅಪಾರ ಅನುಗ್ರಹದಿಂದ ಸಂಪೂರ್ಣ ಗುಣಮುಖರಾಗಿ ವಿಶ್ರಾಂತಿ ಪಡೆಯಲು ಕಾಸರಗೋಡಿನ ಮನೆಗೆ ತೆರಳಿದ್ದಾರೆ ಎಂದು ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.
ಇಂದು ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಸಂದರ್ಭದಲ್ಲಿ ಯನಪೋಯಾ ಸಂಸ್ಥೆಯ ಕುಲಪತಿ ಹಾಜಿ ವೈ ಅಬ್ದುಲ್ಲಾ ಕುಂಙಿ, ಯುನಿಟಿ ಆಸ್ಪತ್ರೆಯ ಚೆಯರ್ಮೆನ್ ಡಾ.ಹಬೀಬುರ್ರಹ್ಮನ್, ಬ್ಯಾರಿ ಚೇಂಬರ್ಸ್ ಅಧ್ಯಕ್ಷರಾದ ಎಸ್.ಎಂ.ರಶೀದ್ ಹಾಜಿ, ವೈದ್ಯರಾದ ಡಾ.ಮುಹಮ್ಮದ್ ಇಸ್ಮಾಯಿಲ್, ಡಾ.ಗೌತಮ್, ಎಜೆ ಆಸ್ಪತ್ರೆಯ ಡಾ.ಕಮಲಾಕ್ಷ ಶೆಣೈ, ಸ್ಟೀಲ್ ಸೆಂಟರ್ ಮಾಲಕ ಹಾಜಿ ಮೂಸಾ ಮೊಯ್ದಿನ್, ಹಾಜಿ ಸಿ.ಕೆ.ಅಹ್ಮದ್, AAR ಹನೀಫ್ ಹಾಜಿ, ಸಿ.ಎಂ.ಹನೀಫ್, ಮೊದಲಾದ ಗಣ್ಯರು ಶುಭ ಹಾರೈಸಿದ ಸನ್ನಿವೇಶ ಗಮನಸೆಳೆಯಿತು.