ಮಂಗಳೂರು: ದಸರಾ ಸಂದರ್ಭದಲ್ಲಿ ಬಂದರು ನಗರಿ ಮಂಗಳೂರು ಬೆಚ್ಚಿ ಬಿದ್ದಿದೆ. ಪಾರ್ಟಿಗೆಂದು ತೆರಳಿದ್ದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಏರ್ಪಟ್ಟು ಒಬ್ಬನ ಕೊಲೆಯಾಗಿದೆ.
ವಿಜಯದಶಮಿ ಸಂದರ್ಭದಲ್ಲಿ ಮಂಗಳೂರಿನಲ್ಲೂ ಸಡಗರ ಆವರಿಸುತ್ತು. ಇದೇ ಸಂದರ್ಭದಲ್ಲಿ ಒಟ್ಟಾಗಿ ಸೇರಿದ ಯುವಕರು ಪಾರ್ಟಿ ಮಾಡುವ ಸಲುವಾಗಿ ಪಂಪವೆಲ್‌ನ ಲಾಡ್ಜ್‌ಗೆ ತೆರಳಿದ್ದಾರೆ. ತಡರಾತ್ರಿ ವರೆಗೂ ಲಾಡ್ಜ್‌ನಲ್ಲೇ ಇದ್ದ ಗೆಳೆಯರ ನಡುವೆ ಇದ್ದಕ್ಕಿದ್ದಂತೆಯೇ ಜಗಳ ನಡೆದಿದೆ.
ಸುಮಾರು ರಾತ್ರಿ 2 ಗಂಟೆ ಹೊತ್ತಿಗೆ ಈ ಜಗಳ ನಡೆದಿದೆ ಎನ್ನಲಾಗಿದ್ದು, ಜೇಸನ್ ಎಂಬಾತ ಸ್ನೇಹಿತ ಧನುಷ್‌ಗೆ ಮಾರಕಾಯುಧದಿಂದ ಇರಿದಿದ್ದಾನೆ ಎನ್ನಲಾಗಿದೆ. ಗಾಯಾಳು ಧನುಷ್‌ನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.