(ಚಿತ್ರ: ಮಂಜು ನೀರೇಶ್ವಾಲ್ಯ)
ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ ದೇವರ ಹಾಗೂ ಪರಿವಾರ ದೇವರುಗಳ ಚಾತುರ್ಮಾಸ ಆಚರಣೆಗೆ ವಿಧ್ಯುಕ್ತವಾಗಿ ಮಂಗಳವಾರ ವೈದಿಕ ವಿಧಿವಿಧಾನಗಳೊಂದಿಗೆ ಪ್ರಾರಂಭಗೊಂಡಿದೆ.
ಪ್ರಾತಃ ಕಾಲ ಸಮಸ್ತ ಸಮಾಜಬಾಂಧವರೊಂದಿಗೆ ಶ್ರೀ ದೇವಳದ ಆಡಳಿತ ಮಂಡಳಿ ಹಾಗೂ ವಿದ್ವತ್ ವೈದಿಕರು ಶ್ರೀ ದೇವರ ಸನ್ನಿಧಾನದಲ್ಲಿ ಮಹಾಪ್ರಾರ್ಥನೆ ನಡೆಸಿ ಬಳಿಕ ಶ್ರೀ ದೇವರಿಗೆ ಪಂಚಾಮೃತ, ಗಂಗಾಭಿಷೇಕ, ಪವಮಾನಾಭಿಷೇಕ ಹಾಗೂ ಶತ ಕಲಶಾಭಿಷೇಕಗಳು ಜರಗಿದವು. ಮಧ್ಯಾಹ್ನ ಪೂಜೆ ಬಳಿಕ ಸಮಾರಾಧನೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್, ವೇದಮೂರ್ತಿ ಚಂದ್ರಕಾಂತ್ ಭಟ್ ತಂತ್ರಿಗಳಾದ ಪಂಡಿತ್ ಕಾಶೀನಾಥ್ ಆಚಾರ್ಯ ಉಪಸ್ಥಿತರಿದ್ದರು.